ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸತ್ಸಂಗದಿಂದ ಮನದ ಕತ್ತಲೆ ದೂರ’: ವೇದಾಂತ ಪಂಡಿತ ಜನಾರ್ಧನ ಪಾಣಿಪಾತ

Last Updated 13 ನವೆಂಬರ್ 2019, 11:54 IST
ಅಕ್ಷರ ಗಾತ್ರ

ಕೆಂಭಾವಿ: ‘ಮನುಷ್ಯನ ಬದುಕು ಹೂವಾಗಿ ಅರಳಿ ಸುಗಂಧ ಬೀರಬೇಕು’ ಎಂದು ವೇದಾಂತ ಪಂಡಿತ ಜನಾರ್ಧನ ಪಾಣಿಪಾತ ಅಭಿಪ್ರಾಯಪಟ್ಟರು.

ಸಮೀಪದ ಕರಡಕಲ್ ಗ್ರಾಮದ ನಾಲವಾರ ಕೋರಿಸಿದ್ಧೇಶ್ವರ ಶಾಖಾ ಮಠದಲ್ಲಿ ಮಂಗಳವಾರ ನಡೆದ 222ನೇ ಮಾಸಿಕ ಶಿವಾನುಭವ ಚಿಂತನ ಹಾಗೂ ಸತ್ಸಂಗ ಗೋಷ್ಠಿಯಲ್ಲಿ ಮಾತನಾಡಿ, ಸುಂದರ ಮನೆಯಲ್ಲಿ ಹೂ ಬುಟ್ಟಿ ಇದ್ದರೆ, ಎಲ್ಲೆಡೆ ಸುಗಂಧ. ಅದರಂತೆ ಈ ದೇಹವೆಂಬ ಮನೆಯಲ್ಲಿ ಶಾಸ್ತ್ರಗಳೆಂಬ ಹೂವಿನ ಬುಟ್ಟಿಯಿಟ್ಟರೆ ಬಾಳೆಲ್ಲ ಸುಗಂಧವಾಗುತ್ತದೆ ಎಂದರು.

ದೀಪ ಬಾಹ್ಯ ಕತ್ತಲೆಯನ್ನು ಕಳೆದರೆ, ಗುರು ಅಂತರಂಗದ ಅಜ್ಞಾನವನ್ನು ನಿವಾರಿಸಬಲ್ಲ. ಬೆಳಕು ಬದುಕಿಗೆ ದಾರಿ ದೀಪವಾದಾಗ ಜೀವನ ಸಾರ್ಥಕವಾಗುವುದು, ತಪ್ಪು ದಾರಿಯಲ್ಲಿ ನಡೆಯುವ ಗುಂಪಿನ ಜತೆ ಹೆಜ್ಜೆ ಹಾಕುವುದಕ್ಕಿಂತ ಸರಿ ದಾರಿಯಲ್ಲಿ ಏಕಾಂಗಿಯಾಗಿ ನಡೆಯುವುದೇ ಸರಿ ಎಂದು ತಿಳಿಸಿದರು.

ಪೀಠಾಧಿಪತಿ ಶಾಂತರುದ್ರಮುನಿ ಸ್ವಾಮೀಜಿ, ಬೀರಲಿಂಗ ಶರಣರು, ಭೀಮನಗೌಡ ಮೇಟಿ, ಯಂಕಣ್ಣ ತಳ್ಳಳ್ಳಿ, ಮಲ್ಲಿಕಾರ್ಜುನ ಯಡಹಳ್ಳಿ, ಸದಾಶಿವಪ್ಪ ಶಹಾಪುರ, ನಿಂಗಣ್ಣ ಇಬ್ರಾಹಿಂಪುರ, ಬಲಭೀಮ ಹೂವಿನಹಳ್ಳಿ, ಪುತ್ರಪ್ಪ ಹೂವಿನಹಳ್ಳಿ, ಮಹಾದೇವಪ್ಪ ಹಾಗೂ ಸಿದ್ಧಪ್ಪ ನಾಟಿಕಾರ ಇದ್ದರು.

ಶಿವಪ್ರಕಾಶ ನಿರೂಪಿಸಿದರು. ಸೋಮಶೇಖರ ಮದ್ದೂರ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT