ಶಹಾಪುರ: ನಗರದ ಗೋಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ (ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ)ದ ಸಂಯೋಜಿತ 9ನೇ ರಾಜ್ಯ ಸಮ್ಮೇಳನದ ‘ಪ್ರತಿನಿಧಿ ಅಧಿವೇಶನ’ದಲ್ಲಿ ರಾಜ್ಯ ಸಮಿತಿ ಪದಾಧಿಕಾರಿ ಮುನಿವೆಂಕಟಪ್ಪ ಅವರು 18 ನಿರ್ಣಯಗಳನ್ನು ಮಂಡಿಸಿದರು.

ಎ.ಅನಿಲಕುಮಾರ ಅನುಮೋದಿಸಿದ ತಕ್ಷಣ ಸಭೆಯಲ್ಲಿದ್ದ ಎಲ್ಲಾ ಮುಖಂಡರು ಕೈ ಎತ್ತುವ ಮೂಲಕ ನಿರ್ಣಯಗಳನ್ನು ಅಂಗೀಕರಿಸಿದರು. ಅಂಗೀಕಾರದೊಂದಿಗೆ ಮೂರು ದಿನಗಳ ಕಾಲ ನಡೆದ ಸಮ್ಮೇಳನ ಹಾಗೂ ಅಧಿವೇಶನಕ್ಕೆ ತೆರೆ ಎಳೆಯಲಾಯಿತು.

ಯಾವೆಲ್ಲಾ ನಿರ್ಣಯಗಳ ಅಂಗೀಕಾರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಹೆಸರನ್ನು ‘ಕರ್ನಾಟಕ ಕೃಷಿಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ’ ಎಂದು ಬದಲಾಯಿಸಲು ನಿರ್ಣಯ ಕೈಗೊಳ್ಳಲಾಯಿತು.

ವಿಬಿಜಿರಾಮಜಿ ತೊಲಗಿಸಿ, ನಿವೇಶನ ಹಕ್ಕು ಪತ್ರಕ್ಕಾಗಿ, ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ, ಬ್ಯಾಂಕ್ ಸಾಲಕ್ಕಾಗಿ, ಉಚಿತ ಶಿಕ್ಷಣ, ಸರ್ಕಾರಿ ಶಾಲೆ ಉಳಿವಿಗಾಗಿ, ಕೇರಳ ಮಾದರಿಯಲ್ಲಿ ಕೂಲಿಕಾರರ ಮಂಡಳಿ ಸ್ಥಾಪನೆ, ಮೈಕ್ರೋ ಫೈನಾನ್ಸ್ ಹಾವಳಿ ತಡೆ, ಸಾರ್ವತ್ರಿಕ ಪಡಿತರ ವ್ಯವಸ್ಥೆ ಬಲಪಡಿಸಲು, ಕನಿಷ್ಠ ಕೂಲಿಕಾಯ್ದೆ ಜಾರಿ, ಸಾಮಾಜಿಕ ಭದ್ರತೆ ಕಲ್ಯಾಣ ಕಾರ್ಯಕ್ರಮಗಳನ್ನು ಕೇರಳ ಮಾದರಿಯಲ್ಲಿ ಜಾರಿಗೆ ತರಲು ಒತ್ತಾಯಿಸಲಾಯಿತು.

ಅಲ್ಲದೆ, ಬಗರ್ ಹುಕುಂ ಸಾಗುವಳಿದಾರರಿಗೆ ತಕ್ಷಣ ಭೂಮಿ ಹಕ್ಕುಪತ್ರ ವಿತರಣೆ, ಎಸ್ಐಆರ್ ಕೈಬಿಡಬೇಕು, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಡೆ, ಹಾಸ್ಟೆಲ್ ಹಾಗೂ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ₹36 ಸಾವಿರ ವೇತನ ಹಾಗೂ ನೌಕರಿ ಕಾಯಂಮಾತಿ, ಬಳ್ಳಾರಿ ಕುಡತಿನಿ ರೈತರ ಮೇಲಿನ ದೌರ್ಜನ್ಯಕ್ಕೆ ಖಂಡನೆ, ಇರಾನ್ ಮೇಲಿನ ದಾಳಿ ನಿಲ್ಲಿಸಲು, ಕೋಮುವಾದ – ಜಾತಿವಾದದ ವಿರುದ್ಧ ಹೋರಾಟ, ಜಾತಿ, ಲಿಂಗ ತಾರತಮ್ಯ ವಿರುದ್ಧ ಹೋರಾಟ ಕೈಗೊಳ್ಳುವ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸಕೇರಾ, ಉಪಾಧ್ಯಕ್ಷ ಜಿ.ಎಸ್.ನಾಗರಾಜ, ಜಿಲ್ಲಾಧ್ಯಕ್ಷ ದಾವಲಸಾಬ್ ನದಾಫ್, ಚೆನ್ನಪ್ಪ ಆನೇಗುಂದಿ ಸೇರಿದಂತೆ ಸಂಘದ ಇನ್ನಿತರ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-30-2121760093

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.