ಶಹಾಪುರ: ‘ಹೇಮರಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರ ಸಂಘದದಲ್ಲಿ ಸಾಲ ಮಂಜೂರಾತಿ ಹೆಸರಿನಲ್ಲಿ ಬ್ಯಾಂಕಿನ ಅಧ್ಯಕ್ಷರ ನಕಲಿ ಸಹಿ ಮಾಡಿ ₹ 6.62 ಕೋಟಿ ಬ್ಯಾಂಕಿನ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ವಂಚನೆ ಮಾಡಿದ್ದಾರೆ’ ಎಂದು ಸಂಘದ ಅಧ್ಯಕ್ಷ ಬಸನಗೌಡ ಮರಕಲ್ ಅವರು ಬ್ಯಾಂಕಿನ ಮೂವರು ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ.

ಬ್ಯಾಂಕಿನ ವ್ಯವಸ್ಥಾಪಕ ರವಿಕಿರಣರಡ್ಡಿ, ಸಹಾಯಕ ವ್ಯವಸ್ಥಾಪಕ ವೆಂಕಟರಡ್ಡಿ, ಪಿಗ್ಮಿ ಸಂಗ್ರಹಗಾರ ಸಂಗಣ್ಣ ಎನ್ನುವವರ ಮೇಲೆ ದೂರು ದಾಖಲಾಗಿದೆ.

ಏನಿದು ಪ್ರಕರಣ?: ನಗರದಲ್ಲಿ ಹೇಮರಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರ ಸಂಘ(ಬ್ಯಾಂಕ್) 2012-13ರಲ್ಲಿ ಸ್ಥಾಪನೆಗೊಂಡಿದ್ದು, ಅದರಂತೆ 13 ಜನ ಆಡಳಿತ ಮಂಡಳಿಯ ನಿರ್ದೇಶಕರಿದ್ದಾರೆ. ಸತತ ಮೂರನೇ ಬಾರಿಗೆ ಬ್ಯಾಂಕಿನ ಅಧ್ಯಕ್ಷರಾಗಿ ಬಸವನಗೌಡ ಪಾಟೀಲ ಅವರು ಸೇವೆ ಸಲ್ಲಿಸುತ್ತಿದ್ದಾರೆ.

‘2026 ಮಾರ್ಚ್ 3ರಂದು ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು ಸಭೆ ನಡೆಸಿದಾಗ ಲೆಕ್ಕ ಪತ್ರದಲ್ಲಿ ವ್ಯತ್ಯಾಸ ಆಗಿರುವುದು ಕಂಡು ಬಂದಿತು. ಇದರಿಂದ ಅನುಮಾನಗೊಂಡು ಸಮಗ್ರವಾಗಿ ಪರಿಶೀಲಿಸಿದಾಗ ಸಾಲದ ಫಾರಂಗಳಲ್ಲಿ ನನ್ನಂತೆ ಸಹಿ ಮಾಡಿರುವುದು ಕಂಡು ಬಂದಿತ್ತು. ಇದರ ಬಗ್ಗೆ ಸಿಬ್ಬಂದಿಗೆ ವಿಚಾರಿಸಿದಾಗ ನಾವೇ ಅಧ್ಯಕ್ಷರ ನಕಲಿ ಸಹಿ ಮಾಡಿ ಸಾಲಗಾರರಿಗೆ ಹಣ ಮಂಜೂರು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ’ ಎಂದು ಬ್ಯಾಂಕಿನ ಅಧ್ಯಕ್ಷ ದೂರಿನಲ್ಲಿ ತಿಳಿಸಿದ್ದಾರೆ.

‘ಒಬ್ಬ ವ್ಯಕ್ತಿಗೆ ₹ 3 ಲಕ್ಷ ಸಾಲ ನೀಡಲು ಅವಕಾಶ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡು ಸಾಲ ಮಂಜೂರಾತಿ ಹೆಸರಿನಲ್ಲಿ 2023 ರಿಂದ 2025ರ ವರೆಗೆ ಒಟ್ಟು ₹ 6.62ಕೋಟಿ ಹಣವನ್ನು ಸಾಲ ಮಂಜೂರಾತಿ ಫಾರಂ ಮೇಲೆ ಅಧ್ಯಕ್ಷರ ಸಹಿ ಇಲ್ಲದೆ ಪಿಗ್ಮಿ ಏಜೆಂಟ್ ಸಂಗಣ್ಣ ಇವರ ಖಾತೆಗೆ ವರ್ಗಾವಣೆ ಮಾಡಿಕೊಂಡಿರುತ್ತಾರೆ. ಅಲ್ಲದೆ ಇನ್ನುಳಿದ 125ಕ್ಕಿಂತ ಹೆಚ್ಚು ಫಾರಂಗಳ ಸಾಲ ಮಂಜೂರಾತಿ ಮಾಡಿದ್ದು, ಇದರ ಬಗ್ಗೆ ಬ್ಯಾಂಕಿನಲ್ಲಿ ಯಾವುದೇ ದಾಖಲೆಗಳಿರುವುದಿಲ್ಲ. ನಕಲಿ ಸಹಿ ಮಾಡಿ ಬ್ಯಾಂಕಿನ ಹಣವನ್ನು ತಮ್ಮ ಸ್ವಂತಕ್ಕೆ ದುರ್ಬಳಕೆ ಮಾಡಿ ಮೋಸ, ವಂಚನೆ ಮಾಡಿರುತ್ತಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಶಹಾಪುರ ಠಾಣೆಯ ಪಿಎಸ್ಐ ಶ್ಯಾಮ ಸುಂದರ ನಾಯಕ ಅವರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈಗಾಗಲೇ ಬ್ಯಾಂಕಿನ ಸಿಬ್ಬಂದಿ ಅವರು ಬ್ಯಾಂಕಿನ ಅಧ್ಯಕ್ಷರ ಮನೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಗ್ಗೆಯೂ ದೂರು ದಾಖಲಾಗಿದೆ. ಅಲ್ಲದೆ ಬ್ಯಾಂಕಿನ ಅಧ್ಯಕ್ಷರು ನಮ್ಮ ಸಿಬ್ಬಂದಿಯವರು ನನ್ನ ಮೇಲೆ ಹಲ್ಲೆ ಮಾಡಿ ದ್ದಾರೆ ಎಂದು ಆರೋಪಿಸಿ ಶಹಾಪುರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-30-1702495216

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.