ಶಹಾಪುರ: ‘ಅಧಿಕಾರದ ಅಮಲಿನಲ್ಲಿರುವ ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಕಾಲ ಬಂದಿದೆ. ನಾವು ಸದಾ ಜನರ ಸಂಕಷ್ಟಗಳಿಗೆ ಧ್ವನಿಯಾಗಿ ನಿಲ್ಲಲು ಸಿದ್ಧವಿದ್ದೇವೆ. ಜನರ ಸಮಸ್ಯೆಗಳಿಗೆ ಹೋರಾಟ ಮಾಡದ ಹೊರತು ಪರಿಹಾರ ದೊರಕದು’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶಗೌಡ ಮುದ್ನಾಳ್ ತಿಳಿಸಿದರು.

ಪಟ್ಟಣದ ಆದಿಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಯಾದಗಿರಿ ವಿಧಾನಸಭಾ ಮತಕ್ಷೇತ್ರದ ದೋರನಹಳ್ಳಿ ಹೋಬಳಿ, ಹಯ್ಯಾಳ, ನಾಯ್ಕಲ್ ಜಿಪಂ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ ಮಾತನಾಡಿ, ‘ಸರ್ಕಾರ ಮತ್ತು ಅಧಿಕಾರಿಗಳಿಗೆ ಹೋರಾಟದ ಬಿಸಿ ಮುಟ್ಟಿಸದಿದ್ದರೆ ಜನರ ಸಮಸ್ಯೆಗಳಿಗೆ ಪರಿಹಾರ ಸಿಗದು’ ಎಂದರು.

ಮುಖಂಡರಲ್ಲಿ ಗೊಲ್ಲಾಳಪ್ಪ ಗೋಲಗೇರಿ, ಸಾಯಬಣ್ಣ ಹಲಗಿ, ನಾಗಶೆಟ್ಟಿ ಸಾಹುಕಾರ, ಕಲ್ಲಪ್ಪ ಖಾನಾಪುರ, ಶಂಕ್ರಯ್ಯಸ್ವಾಮಿ, ಸಿದ್ದಣ್ಣ, ಇಂದ್ರಜಿತ್, ರಾಜು ಗುತ್ತೇದಾರ, ಮಲ್ಲರಡ್ಡಿ ದೊರೆ, ಸುರೇಶ ಸಾಹುಕಾರ, ಮಲ್ಲಿನಾಥ ಮಲಗೊಂಡ, ರಂಗಪ್ಪ ದೊರೆ, ಲಿಂಗರಾಜ ಸಾಹುಕಾರ, ವಾಲ್ಮೀಕಿ ನಾಯಕ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-30-611463921

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.