ಕೆಂಭಾವಿ: ಶಹಾಪುರ ಮತಕ್ಷೇತ್ರದ ಪ್ರತಿ ಗ್ರಾಮಕ್ಕೂ ಮೂಲಸೌಕರ್ಯ ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಶರಣಬಸಪ್ಪ ದರ್ಶನಾಪುರ ಹೇಳಿದರು.

ಪಟ್ಟಣದ ಸಮೀಪ ಹೆಗ್ಗನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ₹60 ಲಕ್ಷ ವೆಚ್ಚದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಕೆಂಭಾವಿಯ ಹಿರೇಮಠಕ್ಕೆ ₹15 ಲಕ್ಷ, ನಗನೂರ ಸುಗೂರೇಶ್ವರ ಮಠಕ್ಕೆ ₹15 ಲಕ್ಷ ಹಾಗೂ ಪರಸನಹಳ್ಳಿ ವೀರಭದ್ರೇಶ್ವರ ದೇವಸ್ಥಾನಕ್ಕೆ ₹15 ಲಕ್ಷ, ಕೆಂಭಾವಿ ಪ್ರಮೋದ ಮಂದಿರಕ್ಕೆ ₹10 ಲಕ್ಷ ಅನುದಾನ ಒದಗಿಸಲಾಗಿದೆ. ತಿಪ್ಪನೆಟಗಿ ಗ್ರಾಮದಲ್ಲಿ ಸಿ.ಸಿ ರಸ್ತೆಗೆ ₹50 ಲಕ್ಷ, ಮಾಲಗತ್ತಿ ಗ್ರಾಮದ ಸಿ.ಸಿ ರಸ್ತೆಗೆ ₹50 ಲಕ್ಷ, ಗೋಡ್ರಿಹಾಳ ಗ್ರಾಮದ ಸಿ.ಸಿ ರಸ್ತೆಗೆ ₹80 ಲಕ್ಷ ಹಾಗೂ ನೀರಿಗಾಗಿ ₹10 ಲಕ್ಷ ಅನುದಾನ ನೀಡಲಾಗಿದೆ’ ಎಂದರು.

‘ಕರಡಕಲ್ ಗ್ರಾಮದ ಸಿ.ಸಿ ರಸ್ತೆಗೆ ₹63 ಲಕ್ಷ, ಕಿರದಳ್ಳಿ ಗ್ರಾಮದ ಸಿ.ಸಿ ರಸ್ತೆಗೆ ₹1 ಕೋಟಿ (ಸಿಎಂಐಡಿ), ಪರಸನಹಳ್ಳಿಯ ಎರಡು ವಾರ್ಡ್ಗಳಿಗೆ ₹50 ಲಕ್ಷ ನೀಡಲಾಗಿದೆ. ಕೆಂಭಾವಿಯಲ್ಲಿ ಸಿ.ಸಿ ರಸ್ತೆ ನಿರ್ಮಾಕ್ಕೆ ವಿಶೇಷ ಅನುದಾನ ₹4 ಕೋಟಿ, ಪೊಲೀಸ್ ವಸತಿ ಗೃಹಕ್ಕಾಗಿ ₹3 ಕೋಟಿ ಹಾಗೂ ಮೌಲಾನಾ ಅಬ್ದುಲಗಗ ಕಲಾಂ ಆಜಾದ ಶಾಲೆಗೆ ₹5 ಕೋಟಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿವಮಾಂತ ಚಂದಾಪುರ, ಬಸನಗೌಡ ಹೊಸಮನಿ, ಬಾಪುಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಚಿಂಚೋಳಿ, ಶಿವರಾಜ ಬೂದುರ, ಅಮೀನರೆಡ್ಡಿ ಪಾಟೀಲ ಕಿರದಳ್ಳಿ, ಎಸ್ಕೆ ಕಲೀಮ ಸೇರಿದಂತೆ ಅನೇಕರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-30-2058356799

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.