ಶಹಾಪುರ: ಕಳೆದ ಮೂರು ದಿನಗಳಿಂದ ತಾಲ್ಲೂಕಿನ ಪೆಟ್ರೋಲ್ ಬಂಕ್ಗಳಲ್ಲಿ ಉಲ್ಬಣಿಸಿದ ಡೀಸೆಲ್ ಸಮಸ್ಯೆಯಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಮಂಗಳವಾರ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಹೆದ್ದಾರಿ ಮೇಲೆ ವಾಹನಗಳ ಓಡಾಟಕ್ಕೂ ಬ್ರೇಕ್ ಬಿದ್ದಿದೆ. ಯಾವುದೇ ಬಂಕ್ ತೆರಳಿದರು ಉದ್ದನೆಯ ಸಾಲಿನ ಜತೆಯಲ್ಲಿ ಡೀಸೆಲ್ ಸಂಗ್ರಹಿಸಲು ದೊಡ್ಡ ಡಬ್ಬಾಗಳನ್ನು ಹಿಡಿದುಕೊಂಡು ನಿಂತಿರುವುದು ಸಾಮಾನ್ಯವಾಗಿದೆ.

‘ಬಂಕ್ಗೆ ಬರುವ ಜನತೆ ಅವಶ್ಯಕತೆ ಇದ್ದಷ್ಟು ತೆಗೆದುಕೊಳ್ಳದೆ ದೊಡ್ಡದಾದ ಡಬ್ಬಾಗಳಲ್ಲಿ ಡೀಸೆಲ್ ಹಾಕಿಸಿಕೊಂಡು ತೆರಳುತ್ತಿದ್ದಾರೆ. ಇಂತಿಷ್ಟು ಲೀಟರ್ ತೆಗೆದುಕೊಳ್ಳಿ ಎಂದರೆ ಜಗಳಕ್ಕೆ ಮುಗಿ ಬಿಳುತ್ತಾರೆ. ಉದ್ದನೆಯ ಸಾಲಿನಲ್ಲಿ ತಾ ಮುಂದು ನಾ ಮುಂದು ಎಂದು ಮಾತಿನ ಕದನವು ಶುರುವಾಗಿ ಬಿಟ್ಟಿದೆ. ಸರದಿ ಸಾಲಿನಲ್ಲಿ ನಿಲ್ಲಿಸಲು ಹರಸಾಹಸಪಡುವಂತೆ ಆಗಿದೆ. ಲಭ್ಯ ಇರುವ ಡೀಸೆಲ್ ಕೆಲ ಗಂಟೆಯಲ್ಲಿ ಬೆಣ್ಣೆಯಂತೆ ಕರಗಿ ಹೋಗುತ್ತಲಿದೆ. ಮತ್ತೆ ಬಂಕ್ ಮುಂದೆ ಉದ್ದನೆ ಹಗ್ಗ ಕಟ್ಟಿ ನೋ ಸ್ಟಾಕ್ ಎಂಬ ನಾಮಫಲಕ ಅಳವಡಿಸುತ್ತಿದ್ದೇವೆ’ ಎಂದು ಬಂಕ್ ಮಾಲೀಕರೋಬ್ಬರು ತಿಳಿಸಿದರು.

‘ಡೀಸೆಲ್ ಕೊರತೆಯನ್ನು ಅರಿತ ಕೆಲ ವ್ಯಕ್ತಿಗಳು ಬಲವಂತವಾಗಿ ಡೀಸೆಲ್ ಪಡೆದುಕೊಂಡು ಗ್ರಾಮೀಣ ಪ್ರದೇಶದಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದು ಕಾಳ ಸಂತೆಗೂ ಮಾರಾಟಕ್ಕೆ ಉತ್ತೇಜನ ನೀಡುತ್ತಲಿದೆ. ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಸಾಮಾನ್ಯ ಪ್ರತಿಯೊಬ್ಬ ಜನತೆಗೆ ಕನಿಷ್ಠ ಅಗತ್ಯವಾದಷ್ಟು ಡೀಸೆಲ್ ಒದಗಿಸುವ ವ್ಯವಸ್ಥೆ ಕಲ್ಪಿಸಬೇಕು’ ಎಂದು ಜನತೆ ಆಗ್ರಹಿಸಿದ್ದಾರೆ.

ಪೆಟ್ರೋಲ್ ಸಮಸ್ಯೆಯಿಲ್ಲ: ತಾಲ್ಲೂಕಿನಲ್ಲಿ ಡೀಸೆಲ್ ಕೊರತೆ ಬಿಗಡಾಯಿಸಿದಷ್ಟು ಪೆಟ್ರೋಲ್ ಸಮಸ್ಯೆ ಅಷ್ಟೊಂದು ಕಾಣುತ್ತಿಲ್ಲ. ಕೆಲ ಬಂಕ್ಗಳಲ್ಲಿ ಪೆಟ್ರೋಲ್ ದೊರೆಯುತ್ತಲಿದೆ. ಆದರೂ ಉದ್ದನೆಯ ಸಾಲು ಕಾಣುತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-30-1985711531

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.