ಶಹಾಪುರ: ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಅಂಬೇಡ್ಕರ್ ಸ್ವಾಭಿಮಾನಿಗಳ ಬಳಗದ ಆಶ್ರಯದಲ್ಲಿ ಬುದ್ದ, ಬಸವ, ಅಂಬೇಡ್ಕರ್ ಜಯಂತ್ಯುತ್ಸವ ಅಂಗವಾಗಿ ಮೇ 31ರಂದು ಬೆಳಿಗ್ಗೆ 11 ಗಂಟೆಗೆ ವಿಭಾಗ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಸಂಘಟಕ ಆರ್.ಚೆನ್ನಬಸ್ಸು ವನದುರ್ಗ ಹಾಗೂ ನೀಲಕಂಠ ಬಡಿಗೇರ ತಿಳಿಸಿದ್ದಾರೆ.

ನಗರದ ಮಾತೋಶ್ರೀ ಸಭಾಂಗಣದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

‘ಅಂಬೇಡ್ಕರ್ ಅವರ ತತ್ವಗಳು ನಮಗೆ ದಾರಿ ದೀಪವಾಗಿವೆ. ಯುವ ಸಮುದಾಯಕ್ಕೆ ಅವರ ವಿಚಾರಧಾರೆಗಳ ಅರಿವು ಮೂಡಿಸುವ ಉದ್ದೇಶದಿಂದ ಕವಿಗೋಷ್ಠಿ ಆಯೋಜಿಸಲಾಗಿದೆ. ಅಂದಿನ ಕಾರ್ಯಕ್ರಮದಲ್ಲಿ ‘ಕೋಲ್ಮಿಂಚಿನ ಬೆಳಕು’ ಪುಸ್ತಕ ಬಿಡುಗಡೆಗೊಳ್ಳಲಿದೆ’ ಎಂದು ಶ್ರೀಶೈಲ್ ಹೊಸಮನಿ ತಿಳಿಸಿದರು.

ಸಭೆಯಲ್ಲಿ ಗೌಡಪ್ಪಗೌಡ ಆಲ್ದಾಳ, ಚೆನ್ನಪ್ಪ ಆನೇಗುಂದಿ, ಪ್ರಕಾಶ ದೊರೆ, ಶೇಖರ ದೊರೆ, ರಾಜು ಅಣಬಿ, ರವೀಂದ್ರನಾಥ ಹೊಸಮನಿ, ಶ್ರೀಶೈಲ್ ಬಿರಾದಾರ, ಬಸವರಾಜ ಸಿಣ್ಣೂರ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-30-179250177

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.