ಶಹಾಪುರ: ನಗರದಲ್ಲಿ ಚರಂಡಿ ಕಾಮಗಾರಿ ನಡೆದಿದೆ. ಕಸ ತ್ಯಾಜ್ಯ ಹಾಕುವುದರಿಂದ ಅಲ್ಪ ಮಳೆಗೂ ನೀರು ಅಕ್ಕಪಕ್ಕದ ವ್ಯಾಪಾರಿಗಳ ಅಂಗಡಿಗಳಿಗೆ ನುಗ್ಗುತ್ತಿದೆ. ವ್ಯಾಪಾರಿಗಳು ರಸ್ತೆ, ಚರಂಡಿಯಲ್ಲಿ ತ್ಯಾಜ್ಯ ಎಸೆಯದೆ ಶುಚಿತ್ವ ಕಾಪಾಡಬೇಕು. ರಸ್ತೆ ಒತ್ತುವರಿ ಮಾಡಬೇಡಿ’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದ ಮೋಚಿಗಡ್ಡಾದಿಂದ ಬಸವೇಶ್ವರ ವೃತ್ತದವರೆಗೆ ನಡೆಯುತ್ತಿರುವ ಚರಂಡಿ ಕಾಮಗಾರಿ ಮಂಗಳವಾರ ಪರಿಶೀಲಿಸಿ ಅವರು ಮಾತನಾಡಿದರು.

ಈಗಾಗಲೇ ನಗರಸಭೆ ಐಡಿಎಸ್ಎಂಟಿ ಅನುದಾನದಲ್ಲಿ ₹1.5 ಕೋಟಿ ವೆಚ್ಚದಲ್ಲಿ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಮುಗಿಯುವ ಮುನ್ನವೇ ಚರಂಡಿಗಳಲ್ಲಿ ಮಣ್ಣು, ತ್ಯಾಜ್ಯ ಹಾಕಿರುವುದರಿಂದ ಮಳೆ ನೀರು ಮುಂದೆ ಸಾಗದೇ ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಇನ್ನೂ ಹೆಚ್ಚುವರಿಯಾಗಿ ₹65ಲಕ್ಷ ಬಿಡುಗಡೆಗೊಳಿಸಿದೆ’ ಎಂದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಹಾಂತಪ್ಪ ಸಾಹು ಚಂದಾಪುರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಆರಬೋಳ, ವಸಂತ ಸುರಪುರಕರ್, ನಿರ್ಮಿತಿ ಕೇಂದ್ರದ ಎಂಜಿನಿಯರ್ ಬಾಪುಗೌಡ ಪಾಟೀಲ, ಮುಖಂಡರಾದ ಭೀಮರಾಯ ಮಮದಾಪುರ, ಮಹಾದೇವಪ್ಪ ಸಾಲಿಮನಿ, ಮಹೇಶ ಮಡಿವಾಳ, ಭಗವಂತರಾಯ ಬಳ್ಳುಂಡಗಿ, ಬಸವರಾಜ ಚೆನ್ನೂರು, ಪಾಶಾ ಪಟೇಲ್, ದೇವಿಂದ್ರಪ್ಪ ತೋಟಿಗೇರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-30-1831791375

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.