ಶಹಾಪುರ: ‘ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಫಿಲ್ಟರ್ ಬೆಡ್ ಕೆರೆಯಲ್ಲಿ ಇನ್ನೂ ಸಾಕಷ್ಟು ನೀರಿನ ಸಂಗ್ರಹವಿದ್ದು ಯಾವುದೇ ಆತಂಕ ಕಾಣಿಸಿಕೊಂಡಿಲ್ಲ. ನಗರಕ್ಕೆ ಮಳೆಗಾಲದಲ್ಲಿ ಯಾವ ರೀತಿ ದಿನ ಬಿಟ್ಟು ದಿನ ನೀರು ಸರಬರಾಜು ಆಗುತ್ತದೆಯೊ ಅದೇ ಮಾದರಿಯಲ್ಲಿ ಈಗಲೂ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ತಿಳಿಸಿದ್ದಾರೆ.

‘ನಗರಸಭೆಯ ವ್ಯಾಪ್ತಿಯಲ್ಲಿ 31 ವಾರ್ಡ್ಗಳಿದ್ದು, ಸದ್ಯಕ್ಕೆ ನೀರಿನ ಭೀತಿ ಇಲ್ಲ. ಅಲ್ಲದೆ ನಗರದಲ್ಲಿ ಅಳವಡಿಸಿರುವ 150 ಕೈ ಪಂಪು, 253 ಕಿರುನೀರು ಸರಬರಾಜು(ಗುಮ್ಮಿ) ಸಹ ಸನ್ನದ್ಧವಾಗಿ ಇಟ್ಟಿದ್ದೇವೆ. ತುಸು ನೀರಿನಲ್ಲಿ ಏರುಪೇರು ಆದರೆ ಆಯಾ ಬಡಾವಣೆಯ ನಿವಾಸಿಗಳು ಇವುಗಳ ಮೂಲಕ ನೀರು ಪಡೆದುಕೊಳ್ಳುತ್ತಾರೆ. ಕೆಟ್ಟು ನಿಂತಿದ್ದ ಹಾಗೂ ದುರಸ್ತಿ ಮಾಡಲು ಆಗದ ಕೈ ಪಂಪುಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದೇವೆ. ಅಲ್ಲದೆ ತುರ್ತು ಪರಿಸ್ಥಿತಿ ಎದುರಾದರೆ ಭೀಮಾ ನದಿಯಿಂದ ನಗರದ ಫಿಲ್ಟರ್ ಬೆಡ್ ಕೆರೆಗೆ ನೀರು ಸಂಗ್ರಹಿಸಲು ವ್ಯವಸ್ಥೆ ಕೂಡ ಮಾಡಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.

‘ನಗರಕ್ಕೆ ಹೊಂದಿಕೊಂಡಿರುವ ನಾಗರಕೆರೆ ಮತ್ತು ಮಾವಿನ ಕೆರೆಯಲ್ಲಿ ನೀರಿನ ಸಂಗ್ರಹ ಇರುವುದರಿಂದ ಅಂತರ್ಜಲಮಟ್ಟ ಕುಸಿತವಾಗಿಲ್ಲ. ಇದರಿಂದ ಅಲ್ಲಿನ ಬಡಾವಣೆಯ ಸುತ್ತಮುತ್ತಲಿನ ಮನೆಯಲ್ಲಿ ಕೊರೆಸಿರುವ ಕೊಳವೆಬಾವಿಯಲ್ಲಿ ನೀರು ಲಭ್ಯವಾಗುತ್ತಲಿದೆ’ ಎನ್ನುತ್ತಾರೆ ನಗರದ ನಿವಾಸಿ ಮೌನೇಶ.

‘ಶಹಾಪುರ ಶಾಖಾ ಕಾಲುವೆ (ಎಸ್ಬಿಸಿ) ಕಾಲುವೆ ನೀರನ್ನು ಸೆಳೆದುಕೊಂಡು ಫಿಲ್ಟರ್ ಬೆಡ್ ಕೆರೆಯಲ್ಲಿ ಸಂಗ್ರಹಿಸಿಕೊಂಡು ನಗರಕ್ಕೆ ಕುಡಿಯುವ ಸರಬರಾಜು ಮಾಡಲಾಗುತ್ತಿದೆ. ಪ್ರಸಕ್ತ ವರ್ಷ ಕಾಲುವೆ ನೀರು ಏಪ್ರೀಲ್ ಮೊದಲ ವಾರದ ವರೆಗೆ ಹರಿಸಲಾಗಿತ್ತು. ಆಗ ನಗರಸಭೆಯ ಸಿಬ್ಬಂದಿ ಮುನ್ನೆಚ್ಚರಿಕೆವಹಿಸಿ ಕೆರೆಗೆ ಹೆಚ್ಚಿನ ನೀರು ಸಂಗ್ರಹಿಸಿಕೊಂಡಿರುವುದು ವರವಾಗಿದೆ. ಆಗಾಗ ಕಾಣಿಸಿಕೊಳ್ಳುವ ತಾಂತ್ರಿಕ ಸಮಸ್ಯೆ ಹೊರತುಪಡಿಸಿ ಬೇಸಿಗೆ ದಿನಗಳಲ್ಲಿ ನೀರನ್ನು ಸಮರ್ಥವಾಗಿ ಸರಬರಾಜು ಮಾಡಿರುವುದು ಸಮಧಾನ ತಂದಿದೆ ಎನ್ನುತ್ತಾರೆ’ ಆಸರ ಮೊಹಲ್ಲಾದ ನಿವಾಸಿ ಆಯಿಷ್ ಪರ್ವಿನ್ ಜಮಖಂಡಿ.

‘ಇನ್ನೂ 15 ದಿನ ಸವೆಸಿದರೆ ಬೇಸಿಗೆಯ ಬಿಸಿಲಿನ ಪ್ರಖರತೆ ಕಡಿಮೆಯಾಗಿ ಅಕಾಲಿಕ ಮಳೆ ಬರುವ ಆಶಾ ಭಾವನೆ ಜನತೆಯಲ್ಲಿ ಇದೆ. ಅಲ್ಲದೆ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಲ್ಲಿ ಕುಡಿಯುವ ನೀರಿಗಾಗಿ ಸಂಗ್ರಹಿಸಿ ಇಟ್ಟಿರುವ ನೀರನ್ನು ಕಾಲುವೆ ಮೂಲಕ ಹರಿಸಿದರೆ ಅನುಕೂಲವಾಗುತ್ತದೆ’ ಎನ್ನುವುದು ನಗರದ ನಿವಾಸಿಗಳ ಆಶಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-30-707727121

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.