ಶಹಾಪುರ: ‘ಗೌತಮ ಬುದ್ಧರು ಸಮಾಜದಲ್ಲಿ ಶಾಂತಿ, ನೆಮ್ಮದಿ ಬಿತ್ತುವ ಕನಸು ಕಂಡಿದ್ದರು. ಬಸವಣ್ಣ ಕಲ್ಯಾಣ ರಾಜ್ಯ ನಿರ್ಮಾಣದ ಗುರಿ ಹೊಂದಿದ್ದರು. ಅಂಬೇಡ್ಕರ್ ಪ್ರಜಾರಾಜ್ಯ ಕಟ್ಟುವ ಕನಸು ಕಂಡಿದ್ದರು. ಆ ಮೂವರು ಜ್ಞಾನ ಸೂರ್ಯರು ಕಟ್ಟಿದ್ದ ಕನಸು ಸಮಾಜದ ಅಭಿವೃದ್ಧಿಯಾಗುವ ಮೂಲಕ ಅವರ ಕನಸು ನನಸಾಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿರ್ದೇಶಕ ಅಮರೇಶ ಯತಗಲ್ ತಿಳಿಸಿದರು.

ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದಲ್ಲಿ ಭಾನುವಾರ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ವಿಭಾಗ ಮಟ್ಟದ ಕವಿಗೋಷ್ಠಿ ಹಾಗೂ ‘ಕೋಲ್ಮಿಂಚಿನ ಬೆಳಕು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

‘ಮೇರು ಸಾಧಕರನ್ನು ಒಂದು ಜಾತಿಗೆ ಸಿಮೀತಗೊಳಿಸಬಾರದು. ಜಾತಿ ಮುಖ್ಯವಲ್ಲ ಅವರ ತತ್ವ, ಸಿದ್ಧಾಂತ, ಬದುಕು ಮುಖ್ಯ. ಅಂಬೇಡ್ಕರ್ ಅವರು ನಮ್ಮ ಹೋರಾಟ ದೀಪ. ಬುದ್ಧ, ಬಸವ, ಅಂಬೇಡ್ಕರ್ ಮನುಕುಲದ ಅರಿವು ವಿಸ್ತರಿಸುವ ಬೆಳಕಿನ ಜ್ಯೋತಿಗಳಾಗಿದ್ದಾರೆ’ ಎಂದರು.

‘ಬುದ್ಧ ಮನೆ ತೊರೆದಿದ್ದು ರೋಹಿಣಿ ನದಿ ನೀರಿನ ಸಲುವಾಗಿ ಎನ್ನುವುದು ಮರೆಯುವಂತಿಲ್ಲ. ಯುದ್ಧದಿಂದ ರಕ್ತಪಾತವಾಗಿ ಕ್ರಾಂತಿಯಾಗಿ ಜನಸಾಮಾನ್ಯರಿಗೆ ತೊಂದರೆಯಾಗಿ ಅನಾಹುತವಾಗುತ್ತದೆ. ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅಂದಿನ ಕಾಲದಲ್ಲಿಯೇ ಅವರು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು ಎನ್ನುವುದಕ್ಕೆ ಅಂಬೇಡ್ಕರ್ ಅವರು ಬರೆದ ಕೃತಿಗಳು ಸಾಕ್ಷಿಯಾಗಿವೆ’ ಎಂದು ಹೇಳಿದರು.

ನಗರದ ಬುದ್ಧ ವಿಹಾರದ ನಾಗರತ್ನ ಭಂತೆ, ಸಾಹಿತಿ ಸಿದ್ರಾಮ ಹೊನ್ಕಲ್, ಶರಣು ಗದ್ದುಗೆ, ರವೀಂದ್ರ ಹೊಸಮನಿ, ಅಂಬ್ಲಯ್ಯ ಸೈದಾಪುರ, ಅಯ್ಯಣ್ಣ ಕನ್ಯಾಕೊಳ್ಳುರ, ಆರ್.ಚೆನ್ನಬಸ್ಸು ವನದುರ್ಗ, ಗಿರಿಯಪ್ಪಗೌಡ ಬಾಣತಿಹಾಳ, ಚೆನ್ನಪ್ಪ ಆನೇಗುಂದಿ, ಪ್ರಕಾಶ ದೊರೆ, ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ, ಶ್ರೀಶೈಲ ಹೊಸಮನಿ, ಸಿದ್ದಪ್ಪ ಹೊಟ್ಟಿ, ಯಲ್ಲಪ್ಪ ನರಿ, ರಾಜು ಅಣಬಿ, ಭೀಮರಾಯ ತಳವಾರ, ಬಾಬುರಾವ ಭೂತಾಳೆ ಸೇರಿದಂತೆ ಇತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಶರಣಪ್ಪ ಕರಡಿ, ದಿ.ಬುದ್ಧಘೋಷ ದೇವೆಂದ್ರ ಹೆಗಡೆ, ಪಾರ್ವತಿ ಬುದನೂರ ಅವರಿಗೆ ‘ಬುದ್ಧ–ಬಸವ–ಅಂಬೇಡ್ಕರ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-30-1564100407

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.