ಶಹಾಪುರ: ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಏ.29ರಂದು ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಆಗಮಿಸುವಂತೆ ವಿವಿಧ ಮಠಗಳ ಮಠಾಧೀಶರು ಹಾಗೂ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೆ ಆಹ್ವಾನ ಪತ್ರ ನೀಡಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸೂಗೂರೇಶ್ವರ ಶಿವಾಚಾರ್ಯರು, ‘ಬಸವಾದಿ ಶಿವಶರಣರ ಹಿಂದೂ ಸಮಾವೇಶ ಪಕ್ಷಾತೀತವಾಗಿದೆ. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎನ್ನುವ ತತ್ವದ ಅಡಿಯಲ್ಲಿ ಹಿಂದೂ ಸಮಾಜದ ಉನ್ನತೀಕರಣಕ್ಕಾಗಿ ಸಂಘಟಿತ ಸಮಾವೇಶ ಮಾಡುತ್ತಿದ್ದೇವೆ. ಇಂತಹ ಪವಿತ್ರ ಕಾರ್ಯಕ್ರಮಕ್ಕೆ ಕನ್ನೇರಿ ಶ್ರೀ ಆಗಮಿಸುತ್ತಿದ್ದಾರೆ’ ಎಂದರು.

‘ತಾವು ಕ್ಷೇತ್ರದ ಹಿರಿಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರಿಂದ ತಮ್ಮ ಉಪಸ್ಥಿತಿ ಅಗತ್ಯವಿದ್ದು, ಉತ್ತಮ ನಾಗಕರಿ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಗುಂಬಳಾಪುರ ಮಠದ ಸಿದ್ದೇಶ್ವರ ಶಿವಾಚಾರ್ಯರು, ಏಕದಂಡಗಿ ಮಠದ ವಿರೂಪಾಕ್ಷಯ್ಯ ಸ್ವಾಮೀಜಿ, ಸಿದ್ರಾಮೇಶ್ವರ ಸ್ವಾಮೀಜಿ ಹಾಗೂ ಮುಖಂಡರಾದ ಬಸವರಾಜ ಹೇರುಂಡಿ, ಮಲ್ಲಿಕಾರ್ಜುನ ಗಂಗಾಧರ ಮಠ, ಗುರು ಕಾಮಾ, ರಾಜೂ ಆನೇಗುಂದಿ, ಅರವಿಂದ ಉಪ್ಪಿನ, ರಾಘವೇಂದ್ರ ಯಕ್ಷಿಂತಿ, ಮಲ್ಲಿಕಾರ್ಜುನ ಚಿಂಚೋಳಿ ಉಪಸ್ಥಿತರಿದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-30-672516901

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.