ಶಹಾಪುರ: ‘ನಗರದಲ್ಲಿ ಮೇ 18ರಂದು ಹಮ್ಮಿಕೊಂಡಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶದ ಬಗ್ಗೆ ಶಹಾಪುರ ತಾಲ್ಲೂಕಿನ ಸಾಹಿತಿಗಳು ಮೌನಕ್ಕೆ ಶರಣಾಗಿರುವುದು ಗಮನಿಸಿದರೆ ಪರೋಕ್ಷವಾಗಿ ಹಿಂದೂ ಸಮಾವೇಶಕ್ಕೆ ಮೌನ ಸಮ್ಮತಿ ನೀಡಿರುವುದು ಸಮಾಧಾನ ತಂದಿದೆ’ ಎಂದು ಕೃಷ್ಣಾ ಅಚ್ಚುಕಟ್ಟು ಪ್ರದೇಶ ಭೂಮಿ ಉಳಿಸಿ ಹೋರಾಟ ಸಂಘದ ಸಂಚಾಲಕ ಅಶೋಕರಾವ ಮುಡಬೂಳ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮಠಾಧೀಶರು ಉತ್ತಮ ಕೆಲಸ ನಿರ್ವಹಿಸುತ್ತಿರುವಾಗ ಫೇಸ್ಬುಕ್, ಯೂಟ್ಯೂಬ್, ವಾಟ್ಸ್ಆ್ಯಪ್ ಮೂಲಕ ಸಮಾವೇಶದ ಬಗ್ಗೆ ಗೊಂದಲ ಎಬ್ಬಿಸುವುದು ಸರಿಯಾದ ನಡೆಯಲ್ಲ’ ಎಂದು ಹೇಳಿದ್ದಾರೆ.

‘ಈಗ ಕಠಿಣ ಸವಾಲು ಎದುರಾದಾಗ ಮುಖಾಮುಖಿಯಾಗಿ ಬಂದು ನಿಲ್ಲದೆ ತಮ್ಮ ಅನುಕೂಲಕ್ಕೆ ತಕ್ಕಂತೆ ಭಾಷಣ ಮಾಡಿ ಮರೆಯಾಗುವುದು ನಿಲ್ಲಿಸಿ. ಪ್ರತಿ ತಿಂಗಳು ಬಸವಣ್ಣನವರ ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡು ಪತ್ರಿಕೆಗಳಲ್ಲಿ ರಾರಾಜಿಸುವ ಸಾಹಿತಿಗಳ ಇಬ್ಬಗೆಯ ನೀತಿ ಮುಂದೆ ನಡೆಯುವ ಸಮಾವೇಶದ ಮೂಲಕ ಬಣ್ಣ ಬಯಲಾಗಲಿದೆ’ ಎಂದು ಲೇವಡಿ ಮಾಡಿದ್ದಾರೆ.

‘ಇನ್ನು ಮುಂದೆ ಬಸವಣ್ಣನವರ ಹೆಸರು ಹೇಳಿ ಜೀವನ ಸಾಗಿಸುವುದನ್ನು ನಿಲ್ಲಿಸಿ, ವಾಸ್ತವದ ಬಗ್ಗೆ ಹಾಗೂ ಹಿಂದೂ ಸಮಾವೇಶದ ಕುರಿತು ಅರಿತುಕೊಳ್ಳಲಿ’ ಎಂದು ಸಲಹೆ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-30-1291480571

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.