ಶಹಾಪುರ: ತಾಲ್ಲೂಕಿನಲ್ಲಿ ಮಂಗಳವಾರ ಬೆಳಿಗ್ಗೆ ಒಂದು ಗಂಟೆ ಸುರಿದ ಹದಭರಿತ ಮಳೆಯಿಂದ ರೈತರಿಗೆ ಹಾಗೂ ಬೇಸಿಗೆ ಸೆಕೆಯಿಂದ ಬಸವಳಿದ ಜನತೆಗೆ ಖುಷಿ ನೀಡಿತು.

ಬೆಳಿಗ್ಗೆ ಗುಡುಗು, ಮಿಂಚು ಹಾಗೂ ಗಾಳಿ ಮಿಶ್ರಿತ ಮಳೆಯ ಅರ್ಭಟ ಜೋರಾಗಿತ್ತು. ಮಳೆಯ ರಭಸಕ್ಕೆ ತಗ್ಗು ಪ್ರದೇಶದ ಜಮೀನುಗಳಿಗೆ ಹಾಗೂ ಕೆಲ ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗಿದವು. ನಂತರ ಮಳೆಯು ಕಡಿಮೆ ಆಗುತ್ತಿದ್ದಂತೆ ಜನತೆ ಹೊರ ಬಂದು ಮಳೆ ನೀರು ಬೇರೆಡೆ ಸಾಗುವ ಕಾಯಕದಲ್ಲಿ ಮಗ್ನರಾದರು.

ಐದು ದಿನದ ಹಿಂದೆ ಒಂದಿಷ್ಟು ಉತ್ತಮ ಮಳೆ ಬಂದಾಗ ರೈತರು ಹತ್ತಿ ಊರಿದ್ದರು (ಬಿತ್ತನೆ) ಮಾಡಿದ್ದರು. ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ದರು. ಅಲ್ಲದೆ ಇನ್ನಷ್ಟು ಹಸಿಯಾಗಲಿ ಎಂಬ ಬಯಕೆಯಲ್ಲಿ ಇದ್ದ ರೈತರಿಗೆ ಮಳೆಯು ನಿರಾಶೆ ಮಾಡಲಿಲ್ಲ. ಹತ್ತಿ ಊರುವ ಕೆಲಸ ಪೂರ್ಣಗೊಳ್ಳಲಿದೆ. ಇನ್ನೆರಡು ಮಳೆ ಬಂದರೆ ಸಾಕು ನಮಗೆ ಕಾಳುವೆ ನೀರು ಬರುತ್ತವೆ ಎಂಬ ಆಶಾ ಭಾವನೆಯನ್ನು ರೈತ ಶಿವಪ್ಪ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-30-918301401

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.