ಶುಕ್ರವಾರ, ನವೆಂಬರ್ 22, 2019
26 °C
ಶಂಕರನಾಗ್ ಆಟೊ ನಿಲ್ದಾಣ ಲೋಕಾರ್ಪಣೆ

‘ಜನರ ಹೃದಯ ಗೆದ್ದ ಶಂಕರನಾಗ್’

Published:
Updated:
Prajavani

ಯಾದಗಿರಿ: ‘ಶಂಕರನಾಗ್ ಅವರ ಕ್ರಿಯಾಶೀಲತೆ, ಸೃಜನಶೀಲತೆಯಿಂದ ಇಂದಿಗೂ ಅವರು ಜನರ ಮನದಲ್ಲಿ ಅದರಲ್ಲೂ ಆಟೊ ಚಾಲಕರ ಮನದಲ್ಲಿ ಉಳಿದುಕೊಂಡಿದ್ದಾರೆ’ ಎಂದು ಡಿವೈಎಸ್ಪಿ ಯು.ಶರಣಪ್ಪ ಹೇಳಿದರು.

ನಗರದ ಗಾಂಧಿ ವೃತ್ತದಲ್ಲಿ ಶಂಕರನಾಗ್ ಆಟೊ ಚಾಲಕರ ಸಂಘದ ವತಿಯಿಂದ ದಿ.ಶಂಕರನಾಗ್ ಅವರ 65ನೇ ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಆಟೊರಾಜ ಶಂಕರನಾಗ ಆಟೊ ನಿಲ್ದಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶಂಕರನಾಗ್ ಅವರು ಮೊದಲ ಬಾರಿಗೆ ಆಟೊ ರಾಜ ಸಿನಿಮಾ ಮಾಡಿದ ನಂತರ ಅವರಿಗೆ ರಾಜ್ಯದ ಆಟೊ ಚಾಲಕರು ಅಭಿಮಾನಿಗಳಾದರು. ನಂತರ ಸಾಂಗ್ಲಿಯಾನಾ ಸಿನಿಮಾ ಮಾಡಿದ ಮೇಲೆ ಅವರ ಹೆಸರು ಸಾಂಗ್ಲಿಯಾನಾ ಎಂದೇ ಬದಲಾಯಿತು. ಶಂಕರನಾಗ್ ಅವರ ಆದರ್ಶಗಳನ್ನು ಆಟೋ ಚಾಲಕರು ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

ಈ ವೇಳೆ ಹಿರಿಯ ಆಟೋ ಚಾಲಕರಾದ ಭಾಗಪ್ಪ ರಾಗೇರ್, ಮಲ್ಲಯ್ಯ ಕೊತ್ವಾಲ್, ಮಲ್ಲಪ್ಪ ಅರಿಕೇರಾ, ಲಕ್ಷ್ಮಣ ಚವ್ಹಾಣ್, ಅಯ್ಯಪ್ಪ ಮುಂಡರಗಿ ಅವರನ್ನು ಸನ್ಮಾನಿಸಲಾಯಿತು.

ಆಟೊ ಚಾಲಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ (ಸಾಂಗ್ಲಿಯಾನಾ), ಉಪಾಧ್ಯಕ್ಷ ಲಕ್ಷ್ಮಣ ಚವ್ಹಾಣ್ಕ, ಕರವೇ ಉತ್ತರ ಕರ್ನಾಟಕದ ಅಧ್ಯಕ್ಷ ಶರಣು ಬಿ.ಗದ್ದುಗೆ, ನಗರ ಠಾಣೆ ಪಿಎಸ್ಐ ಕೃಷ್ಣ ಸುಬೇದಾರ್, ಮಹಿಳಾ ಠಾಣೆ ಪಿಎಸ್ಐ ನಾಗಮ್ಮ ಕಲಬುರ್ಗಿ, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಅಧ್ಯಕ್ಷೆ ರೇಣುಕಾ ಸರಡಗಿ ಇದ್ದರು.

 

ಪ್ರತಿಕ್ರಿಯಿಸಿ (+)