ಶಹಾಪುರ: ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮತ್ತೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷೆಯ ನಿರೀಕ್ಷೆಯ ಬೆನ್ನು ಹತ್ತಿರುವ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ತನ್ನದೆ ಆದ ರಾಜಕೀಯ ಹೋಂ ವರ್ಕ್ ಮಾಡಿಕೊಂಡು ತೆರೆಮರೆಯಲ್ಲಿ ಕಸರತ್ತು ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ.

2023 ಮೇ 28ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಭರ್ತಿ ಮೂರು ವರ್ಷ ಪೂರೈಯಿಸಿ ಮುನ್ನಡೆಯುತ್ತಿರುವಾಗ ಕಾಂಗ್ರೆಸ್ ಹೈಕಮಾಂಡ್ ರಾಜಕೀಯ ಬದಲಾವಣೆಯ ಕಾಲಚಕ್ರ ತಿರುಗಿದಾಗ ಸಚಿವ ಸಂಪುಟ ವಿಸರ್ಜನೆಗೊಂಡಿದೆ. ಅಲ್ಲದೆ ಸಚಿವರ ಒಂದು ಅಧ್ಯಾಯ ಮುಕ್ತಾಯಗೊಂಡಿದೆ.

ಶಹಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬ ಟೀಕೆಯ ನಡುವೆ ಮೂರು ವರ್ಷದಲ್ಲಿ ಯಾವುದೆ ಗೋಜಲು ಇಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಮರ್ಥವಾಗಿ ನಿರ್ವಹಣೆ ಮಾಡಿಕೊಂಡು ಬಂದರು. ಜಿಲ್ಲೆಯಲ್ಲಿ ಸಂಭವಿಸಿದ ಹಲವು ಘಟನೆಗಳನ್ನು ತಮ್ಮ ರಾಜಕೀಯ ಜಾಣ್ಮೆಯಿಂದ ಎದುರಿಸಿ ಇಡೀ ಜಿಲ್ಲೆಯನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದರು. ಆದರೆ ಜಿಲ್ಲೆಗೆ ಶಾಶ್ವತವಾದ ಒಂದು ಯೋಜನೆಯನ್ನು ಉಸ್ತುವಾರಿ ಸಚಿವರ ಅವಧಿಯಲ್ಲಿ ಜಿಲ್ಲೆಗೆ ಬಾರದೆ ಇರುವುದು ಜನತೆಯಲ್ಲಿ ಬೇಸರವು ಕಾಡಿದೆ ಎಂಬ ಮಾತುಗಳು ಕೇಳಿ ಬರುತ್ತಲಿವೆ.

ಎದುರಾಳಿಯ ರಾಜಕೀಯ ಪಕ್ಷದ ನಾಯಕರಿಗೆ ನಿಧಾನಗತಿಯ ರಾಜಕೀಯ ವಿಷವನ್ನು ಬೇರಿಸುತ್ತಾ ಅರಿವಿಗೆ ಬಾರದಂತೆ ಮೂಲೆಗುಂಪು ಮಾಡುವ ಕಲೆ ಅವರಿಗೆ ಕರಗವಾಗಿದೆ. ಅಲ್ಲದೆ ಕೊಟ್ಟ ಮಾತು ಉಳಿಸಿಕೊಳ್ಳುವ ನಾಯಕ ಎಂಬ ಖ್ಯಾತಿಯನ್ನು ಹೊಂದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಿಕೊಂಡು ಅವರ ನಿಷ್ಠೆಗೆ ಪಾತ್ರರಾಗಿ ಕಳೆದ ಸಲ ಸಚಿವ ಸ್ಥಾನ ಪಡೆದುಕೊಂಡಿದ್ದರು. ಈಗ ಮತ್ತೆ ಅದೇ ದಾಳವನ್ನು ಉರುಳಿಸುವುದರ ಜತೆಯಲ್ಲಿ ಪ್ರಬಲ ಖಾತೆಯ ಮೇಲೆ ಕಣ್ಣು ಇಟ್ಟಿದ್ದಾರೆ. ರಾಜಕೀಯ ನಿಂತ ನೀರಲ್ಲ ಏನಾದರು ಬದಲಾವಣೆ ಆಗಬಹುದು ಎಂಬ ಅವರ ಅಂತರಂಗದ ನುಡಿ ಹಲವು ರಾಜಕೀಯ ಲೆಕ್ಕಾಚಾರವನ್ನು ಹಾಕುವಂತೆ ಮಾಡುವುದು ಸುಳ್ಳಲ್ಲ.

1996ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ ಅವರ ಸಚಿವ ಸಂಪುಟದಲ್ಲಿ ಇಂಧನ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. 2004ರಲ್ಲಿ ಎರಡನೇಯ ಬಾರಿಗೆ ಎಚ್.ಡಿ.ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಕೃಷಿ ಮಾರುಕಟ್ಟೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ 2023ರಲ್ಲಿ ಸಣ್ಣ ಕೈಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜನ ಸೇವೆ ನಿರ್ವಹಿಸಿದ್ದಾರೆ. ಈಗ ಮತ್ತೊಮ್ಮೆ ನಾಲ್ಕನೆ ಬಾರಿ ಸಚಿವ ಸ್ಥಾನದ ಆಕಾಂಕ್ಷಿಯಾಗಿ ರಾಜಕೀಯ ಹೋರಾಟ ಮುನ್ನಡೆಸಿದ್ದಾರೆ. ಕಾಯ್ದು ನೋಡಬೇಕು ಅಷ್ಟೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-30-1284231664

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.