ಕೆಂಭಾವಿ: ‘ಪ್ರತಿಯೊಬ್ಬ ಮನುಷ್ಯನು ಸದ್ಗುಣ ಬೆಳೆಸಿಕೊಳ್ಳಬೇಕು. ತಮ್ಮ ಗಳಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಸತ್ಕಾರ್ಯಗಳಿಗೆ ದಾನ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಬೀದರ್ ಚಿದಂಬರಾಶ್ರಮದ ಸಿದ್ದಾರೂಢ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

ಪಟ್ಟಣ ಸಮೀಪದ ನಗನೂರ ಗ್ರಾಮದ ಶಾಂತ ಸ್ವರೂಪ ಸಿದ್ದಾಶ್ರಮ ಸಿದ್ದಾರೂಢ ಮಠದಲ್ಲಿ ಆಯೋಜಿಸಿದ್ದ ಪ್ರವಚನ ಮಹಾಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿದಿನ ಪ್ರವಚನ ಆಲಿಸುವುದರಿಂದ ಮನಸ್ಸು ಶುದ್ಧಿ ಆಗುವುದರ ಜತೆಗೆ ಮನದ ಕಲ್ಮಶ ತೊಲಗಿ ಪರಿಶುದ್ಧ ಜೀವನ ನಡೆಸಲು ಸಾಧ್ಯವಾಗುತ್ತದೆ. ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರು ಸಿದ್ದಾರೂಢರಿಗಿದೆ’ ಎಂದರು.

‘ಮನದ ಮಾಲಿನ್ಯ ಕಳೆಯಲು ಜ್ಞಾನದ ಶಕ್ತಿ ಅವಶ್ಯವಾಗಿದೆ. ಈಗಿನ ಕಾಲದ ಸಮಾಜದಲ್ಲಿ ದ್ವೇಷದ ವಾತಾವರಣದಿಂದ ಮಾನವೀಯ ಮೌಲ್ಯಗಳ ಕೊರತೆ ಉಂಟಾಗುತ್ತಿದೆ. ವಿಜ್ಞಾನ ಎಷ್ಟೇ ಮುಂದುವರೆದರೂ ಕೂಡ ಅಂತರಾತ್ಮದ ಶುದ್ಧಿ ಸಾಧ್ಯವಾಗುತ್ತಿಲ್ಲ ಇದಕ್ಕೆ ಪ್ರವಚನವೇ ದಿವ್ಯ ಔಷಧಯಾಗಿದೆ’ ಎಂದರು.

ಕಲಬುರಗಿ ಸಿದ್ದಾರೂಢ ಮಠದ ಮಾತೋಶ್ರೀ ಲಕ್ಷ್ಮೀದೇವಿ ತಾಯಿಯವರು ಮಾತನಾಡಿದರು.

ಈ ಸಂದರ್ಭದಲ್ಲಿ ಬಿ.ಗುಡಿ ಸಾಧಕಾಶ್ರಮದ ಮಾತೋಶ್ರೀ ಜ್ಞಾನೇಶ್ವರಿ ತಾಯಿಯವರು, ಮುಳಸಾವಳಗಿಯ ದಯಾನಂದ ಸ್ವಾಮೀಜಿ, ರಂಗಂಪೇಟೆಯ ಜನಾರ್ಧನ ಪಾಣಿಭಾತೆ, ಆಲಗೂರದ ಶಂಕ್ರಣ್ಣ ಶಾಸ್ತ್ರಿ, ಬಸ್ತಿಹಾಳದ ಅಮೋಗೇಪ್ಪ ಶಾಸ್ತ್ರಿ, ವೀರಯ್ಯಸ್ವಾಮಿ ಸ್ಥಾವರಮಠ, ಸಿದ್ದಯ್ಯ ಸ್ವಾಮಿ ಚಿಕಮಠ, ಜಿಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ, ಟ್ರಸ್ಟ್ ಉಪಾಧ್ಯಕ್ಷ ಶರಣಗೌಡ ಜಿ. ವಣಿಕ್ಯಾಳ, ಮುಖಂಡರಾದ ಅಯ್ಯಣ್ಣಗೌಡ ಲಕ್ಕುಂಡಿ, ಗೌಡಪ್ಪಗೌಡ ವಣಿಕ್ಯಾಳ ಸೇರಿದಂತೆ ಸುತ್ತಲಿನ ಗ್ರಾಮದ ಭಕ್ತರು ಉಪಸ್ಥಿತರಿದ್ದರು.

ಮುಖಂಡ ಮಲ್ಲನಗೌಡ ಜಿ ಗೂಗಲ್ ನಿರೂಪಿಸಿ, ವಂದಿಸಿದರು. ಶಾಂತಗೌಡ ಮಾಲಿ ಪಾಟೀಲ ಕರಡಕಲ್, ಉಮೇಶಸ್ವಾಮಿ ಬಿಬಿ ಇಂಗಳಗಿ ಅವರಿಂದ ಸಂಗೀತ ಸೇವೆ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.