ಭಾನುವಾರ, ಮೇ 22, 2022
23 °C

ಶಾರ್ಟ್‌ ಸರ್ಕ್ಯೂಟ್: ಕರ್ನಾಟಕ ಬ್ಯಾಂಕ್‌ನಲ್ಲಿ ಅಗ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್‌: ಪಟ್ಟಣದ ಕರ್ನಾಟಕ ಬ್ಯಾಂಕ್‌ನಲ್ಲಿ (ಕೆಜಿಬಿ) ಬುಧವಾರ ಸಂಜೆ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿದೆ.

ಬ್ಯಾಂಕ್‌ ಕಟ್ಟಡದ ಮೇಲ್ಬಾಗದಲ್ಲಿ ಹೊಗೆಯಾಡುತ್ತಿರುವುದು ನೋಡಿದ ಸ್ಥಳೀಯರು ಬ್ಯಾಂಕ್‌ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಬ್ಯಾಂಕ್‌ನ ಸಿಬ್ಬಂದಿ ಬಂದು ಬಾಗಿಲು ತೆರೆದ ನಂತರ ಸ್ಥಳೀಯರು ಬೆಂಕಿ ನಂದಿಸಿದ್ದಾರೆ.

ಬ್ಯಾಂಕ್‌ನಲ್ಲಿದ್ದ ಕೆಲ ದಾಖಲೆಗಳು ಕಂಪ್ಯೂಟರ್ ಸುಟ್ಟಿವೆ. ಇದ್ದ ಇತರೆ ದಾಖಲೆಗಳು, ರಿಜಿಸ್ಟರ್ ಡೈರಿಗಳನ್ನು ಬೇರೆಡೆ ಸ್ಥಳಾಂತರಿಸಲಾಯಿತು. ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಗಿತ್ತಾದರೂ, ಬೆಂಕಿಯನ್ನು ನಂದಿಸಿದ ನಂತರ ಅಗ್ನಿಶಾಮಕ ವಾಹನ ಬಂದಿದೆ.

‘ಬ್ಯಾಂಕ್‌ನಲ್ಲಿ ಫೈಯರ್ ಅಲಾರಂ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಗಳು ಇಲ್ಲ. ಹೊಗೆ ಬಂದಿದ್ದು, ನೋಡಿದ್ದರಿಂದ ಬೆಂಕಿ ನಂದಿಸಲು ಸಹಾಯವಾಯಿತು. ಮುಖ್ಯರಸ್ತೆಯಲ್ಲಿರುವ ಬ್ಯಾಂಕ್‌ನಿಂದ ಬೆಂಕಿ ಪಕ್ಕದ ಕಟ್ಟಡಗಳಿಗೆ ಹರಡಿದ್ದರೆ ನಂದಿಸಲೂ ಸಾಧ್ಯವಾಗದೆ, ಭಾರಿ ಅನಾಹುತ ಜರುಗುತಿತ್ತು' ಎಂದು ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು