ಶನಿವಾರ, ಆಗಸ್ಟ್ 20, 2022
21 °C
ಮೋಡ ಕವಿದ ವಾತಾವರಣ, ತಗ್ಗುಪ್ರದೇಶಗಳಲ್ಲಿ ನಿಂತ ನೀರು

ಜಿಲ್ಲೆಯಾದ್ಯಂತ ತುಂತುರು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಬುಧವಾರ ಬೆಳಿಗಿನ ಜಾವದಿಂದ ವಿವಿಧೆಡೆ ತುಂತುರು ಮಳೆಯಾಗಿದೆ. ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದು, ತಂಪಿನ ಅನುಭವವಾಗುತ್ತಿದೆ.

ಬುಧವಾರ ಬೆಳಿಗ್ಗೆ ಉತ್ತಮ ಮಳೆಯಾಗಿತು. ನಂತರ ಮಧ್ಯಾಹ್ನದ ವರೆಗೆ ಜಿಟಿಜಿಟಿ ಮಳೆ ಸುರಿಯಿತು. ಮೋಡ ಕವಿದ ವಾತಾವರಣ ಇತ್ತು.

ಸೈದಾಪುರ ಪಟ್ಟಣದ ನಾಡ ಕಚೇರಿ ಒಳಗೆ ಮಳೆ ನೀರು ನುಗ್ಗಿದೆ. ತಗ್ಗು ಪ್ರದೇಶದಲ್ಲಿ ಕಟ್ಟಡವಿದ್ದು, ಒಂದು ಅಡಿ ನೀರು ಕಚೇರಿಯಲ್ಲಿ ಸಂಗ್ರಹಗೊಂಡಿದೆ. ಮಳೆ ಬಂದರೆ ಕಟ್ಟಡ ಸೋರುತ್ತಿದ್ದು, ಸಾರ್ವಜನಿಕ ಕೆಲಸಗಳಿಗೆ ಅಡ್ಡಿಯಾಗಿದೆ. ಶಹಾಪುರದಲ್ಲಿ ಬುಧವಾರ ಬೆಳಗಿನ ಜಾವ ಜಿಟಿ ಜಿಟಿ ಮಳೆಯಾಗಿದೆ. ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ನಿಂತಿದೆ. ಗುರುಮಠಕಲ್‌ನಲ್ಲಿ ರಾತ್ರಿಯಿಂದ ಜಿಟಿ-ಜಿಟಿ ಮಳೆಯಿತ್ತು. ಕಕ್ಕೇರಾದಲ್ಲಿ ಮಂಗಳವಾರ ರಾತ್ರಿ ಮಳೆ ಬಂದಿದೆ. ಜಿಲ್ಲೆಯ ಉಳಿಧೆಡೆ ಜಿಟಿಜಿಟಿ ಮಳೆ ಸಾಮಾನ್ಯವಾಗಿದೆ. 

31 ಎಂಎಂ ಮಳೆ: ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ 31 ಎಂಎಂ ಮಳೆಯಾಗಿದೆ. ಸೈದಾಪುರ ಹೋಬಳಿ ಬಾಡಿಯಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 90 ಎಂಎಂ ಹೆಚ್ಚು ಮಳೆಯಾಗಿದೆ.  

ದೇವರಗೋನಾಲ 22, ಹತ್ತಿಗೂಡರ 18, ರಸ್ತಾಪುರ 25, ಚಾಮನಾಳ 20, ಚಿಕ್ಕಮುದನೂರ 22, ರಾಮಸಮುದ್ರ 22, ಮೋಟನಹಳ್ಳಿ 22, ದೇವಾಪುರ 18, ಸೂಗೂರ 14, ಹೆಮನೂರ 18, ಮೂಡಬೂಳ 50, ಕುರಕುಂದ 38, ಮುಂಡರಗಿ 26, ಸಗರ (ಬಿ) 20, ಹಲಗೇರಾ 32, ತಡಿಬಿಡಿ 44, ನಾಯ್ಕಲ್ 24, ಠಾಣಗುಂದಿ 22, ಅರಕೇರಾ (ಬ) 26, ಗಾಜರಕೋಟ 18, ಚಪೆಟ್ಲಾ 14, ಚಂಡರಕಿ 12, ಪುಟಪಾ 16, ಮಿನಸಾಪುರ 35, ಪಸಪುಲ್ 28, ಎಲ್ಹೇರಿ 29, ಯಲಸತ್ತಿ 26, ಜೈಗ್ರಾಮ 38, ಕಡೇಚೂರ 38, ಮಲ್ಹಾರ 30, ಹಳಿಗೇರಾ 25, ಅಣಬಿ 28, ಮದ್ರಕಿ 38, ಉಕ್ಕಿನಾಳ 24, ಹೊಸಕೇರಾ 24, ವನದುರ್ಗಾ 22, ಕನ್ನೇಕೊಳ್ಳೂರ 32, ಟಿ.ವಡಗೇರಾ 28, ಬಿಳ್ಹಾರ 54, ಗೋನಾಳ 25, ಅರಕೇಕಾ (ಕೆ) 16, ಮಾಲಗತ್ತಿ 22, ನಗನೂರ 25, ಏವೂರ 17, ಯಕ್ತಾಪುರ 24, ಬೈಚಬಾಳ 19, ವಗಣಗೇರಾ 30, ಹೆಬ್ಬಾಳ (ಬಿ) 28, ರಾಜನಕೊಳೂರ 34, ಬೀರನೂರ 22, ಗುಂಡಗುರ್ತಿ 34, ತುಮಕೂರ 41, ಐಕೂರ 36, ಕಕ್ಕೇರಾಗೇರಾ 28, ಕಿರದಹಳ್ಳಿ 26, ಹುರಸಗುಂಡಿಗಿ 46, ಕರೇಕಲ್‌ 14 ಎಂಎಂ ಮಳೆಯಾಗಿದೆ.

***

ನಗರಸಭೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ತರಕಾರಿ ವ್ಯಾಪಾರ ಮಾಡಲು ಟಿನ್ ಶೆಡ್ ಹಾಕುತ್ತೇವೆ ಎಂದು ಹೇಳಿದ್ದರು. ಇಲ್ಲಿಯವರೆಗೆ ಹಾಕಿಲ್ಲ

- ಮಲ್ಲ‍ಪ್ಪ ದಾಸನ್‌, ತರಕಾರಿ ವ್ಯಾಪಾರಿ

***

ಸರಿಯಾದ ಜಾಗವಿಲ್ಲದಿದ್ದರಿಂದ ತರಕಾರಿ ಕೊಳೆತು ಹೋಗಿದೆ. ಯಾರಿಗೆ ಹೇಳಬೇಕು ನಮ್ಮ ಸಮಸ್ಯೆ? ಅಧಿಕಾರಿಗಳು ನಮ್ಮ ಗೋಳು ಕೇಳುತ್ತಿಲ್ಲ -

ಮಹಮ್ಮದ್ ನಿಸಾರ್, ತರಕಾರಿ ವ್ಯಾಪಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು