ಸ್ಥಬ್ದವಾದ ಕೃಷ್ಣೆಯ ಅಬ್ಬರ:
ಬಸವಸಾಗರದ ಮೂಲಕ ನದಿಗೆ ಲಕ್ಷಾಂತರ ಕ್ಯುಸೆಕ್ ನೀರು ಹರಿಬಿಟ್ಟ ವೇಳೆ ರಭಸದಿಂದ ಕ್ರಸ್ಟ್‌ಗೇಟ್‌ಗಳ ಮೂಲಕ ಧುಮ್ಮಿಕ್ಕುವ ಕೃಷ್ಣೆಯ ಬೋರ್ಗರೆಯುವ ನೀರಿನ ಶಬ್ದಗೊಂದಿಗೆ ತೆರೆಗಳ ಅಪ್ಪಳಿಸುವಿಕೆಯ ಕಣ್ಣು ಹಾಯಿಸಿದಷ್ಟು ವಿಶಾಲವಾಗಿ ಹರಿಯುವ ನೀರಿನ ನೋಟ ನೋಡುಗರಲ್ಲಿ ವಿಸ್ಮಯ ಉಂಟು ಮಾಡಿತ್ತು. ಕೃಷ್ಣೆಯ ಜಲವೈಭದ ರುದ್ರ ರಮಣೀಯ ದೃಶ್ಯವನ್ನು ಪ್ರವಾಸಿಗರು ಕುಟುಂಬಸ್ಥರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು. ಮಹಾರಾಷ್ಟ್ರ ಕೃಷ್ಣಾ ನದಿ ಉಗಮ ಸ್ಥಾನವಾದ ಮಹಾಬಳೇಶ್ವರ ಸೇರಿ ಕೃಷ್ಣಾ ಜಲಾನಯನ ಮತ್ತು ಕೃಷ್ಣೆಯ ಉಪನದಿಗಳ ವ್ಯಾಪ್ತಿಯಲ್ಲಿ ಸದ್ಯ ಮಳೆ ತಗ್ಗಿದ್ದರಿಂದ ನೀರು ಕೃಷ್ಣೆಯ ಅಬ್ಬರ ಕಡಿಮೆಯಾಗಿದೆ.