ಮಂಗಳವಾರ, ಸೆಪ್ಟೆಂಬರ್ 21, 2021
21 °C
ಭಾರತ್‌ ಎಲೆಕ್ಟ್ರಾನಿಕ್ಸ್ ಸಹಯೋಗದಲ್ಲಿ ಅಳವಡಿಕೆ

ಯಾದಗಿರಿ: ಜಿಲ್ಲೆಯ 122 ಪ್ರೌಢ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯ 122 ಪ್ರೌಢ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ಗೆ ಸಿದ್ಧತೆ ನಡೆದಿದೆ. 8, 9, 10 ತರಗತಿಯ ವಿದ್ಯಾರ್ಥಿಗಳಿಗೆ ವಿವಿಧ ಪಠ್ಯಕ್ರಮಗಳನ್ನು ಟಿವಿ ಪರದೆ ಮೂಲಕ ವಿವರಣಾತ್ಮಕವಾಗಿ ಬೋಧನೆಗೆ ಅನುಕೂಲ ಕಲ್ಪಿಸಲಾಗಿದೆ. 

ಭಾರತ್‌ ಎಲೆಕ್ಟ್ರಾನಿಕ್ಸ್ (ಬಿಇಎಲ್‌) ಕಂಪನಿ ವತಿಯಿಂದ ಸುಮಾರು ₹3.80 ಕೋಟಿ ಖರ್ಚು ಮಾಡಿ 122 ಪ್ರೌಢ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸಲಾಗುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ. ಚವ್ಹಾಣ ಅವರು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಯಾದಗಿರಿ ನಗರದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೋಣೆಯನ್ನು ಉದ್ಘಾಟಿಸಲಿದ್ದಾರೆ. 

ಒಂದು ಶಾಲೆಗೆ ₹3.10 ಲಕ್ಷ ಖರ್ಚು ಮಾಡಿ ಪಠ್ಯಕ್ಕೆ ಸಂಬಂಧಿಸಿದಂತೆ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಒಂದು ಟಿವಿ, ಗ್ರೀನ್‌ ಬೋರ್ಡ್‌, ಸೊಲಾರ್‌ ಪ್ಯಾನೆಲ್‌ ನೀಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಪಾಠ ನಡೆಯಲಿದೆ.

ಏನಿದು ಸ್ಮಾರ್ಟ್‌ ಕ್ಲಾಸ್‌

ಇ–ಪಾಠಗಳನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಲು ವಿವಿಧ ಚಿತ್ರಗಳನ್ನು ಬಳಸಿ ಪಾಠ ಮಾಡುವ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ. ಇದರ ಮೂಲಕ ವಿದ್ಯಾರ್ಥಿಗಳು ಪಠ್ಯಕ್ಕೆ ಸಂಬಂಧಿಸಿದಂತೆ ಪಾಠಗಳನ್ನು ಕಲಿಯಲು ಅನುಕೂಲ ಮಾಡಿಕೊಡುತ್ತಿದೆ. 

‘3 ತಿಂಗಳಲ್ಲಿ ಕಾಮಗಾರಿ ಮುಗಿಯುತ್ತಿತ್ತು. ಆದರೆ, ಲಾಕ್‌ಡೌನ್‌ ಪರಿಣಾಮ 5 ತಿಂಗಳಿಗೆ ವಿಸ್ತರಣೆ ಆಗಿದೆ. ಆದರೂ ಸಕಾಲದಲ್ಲಿ ಸ್ಮಾರ್ಟ್‌ ಕ್ಲಾಸ್‌ ಉದ್ಘಾಟನೆ ಆಗುತ್ತಿದೆ. 20ರಿಂದ 25 ಜನ ಇದರಲ್ಲಿ ತೊಡಗಿಸಿಕೊಂಡಿದ್ದರು’ ಎನ್ನುತ್ತಾರೆ ಬಿಇಎಲ್‌ ಉದ್ಯೋಗಿಯೊಬ್ಬರು.

‘ಹಳ್ಳಿಯ ಮಕ್ಕಳಿಗೆ ಸ್ಮಾರ್ಟ್‌ ಕ್ಲಾಸ್‌ ಸಿಗಬೇಕು ಎನ್ನುವುದು ಕಂಪನಿಯ ಉದ್ದೇಶವಾಗಿದೆ. 9 ಗಂಟೆ ಪವರ್ ಬ್ಯಾಕ್‌ ಆಪ್‌ ಇರುತ್ತದೆ. 5 ವರ್ಷಗಳ ಇದರ ಮೇಲ್ವಿಚಾರಣೆ ಮಾಡುತ್ತೇವೆ. ಯಾವುದೇ ತೊಂದರೆ ಕಂಡು ಬಂದರೆ ನಾವೇ ದುರಸ್ತಿ ಮಾಡುತ್ತೇವೆ’ ಎನ್ನುತ್ತಾರೆ ಸಿಎಸ್‌ಆರ್‌ ಬಿಇಎಲ್ ನೋಡಲ್ ಅಧಿಕಾರಿ ಕವಿತಾ ಶರ್ಮಾ.

ಶಾಲೆಗಳ ಅಂಕಿಅಂಶ

ಯಾದಗಿರಿ;39

ಶಹಾಪುರ;38

ಸುರಪುರ;45

ಒಟ್ಟು;122

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು