ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಅತ್ಯಾಚಾರ ತಡೆಗೆ ವಿಶೇಷ ಪಡೆ ರಚನೆ- ಡಾ. ಸಿ.ಬಿ. ವೇದಮೂರ್ತಿ

Last Updated 6 ಅಕ್ಟೋಬರ್ 2021, 6:48 IST
ಅಕ್ಷರ ಗಾತ್ರ

ಸುರಪುರ: ‘ಜಿಲ್ಲೆಯಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಮಹಿಳಾ ಸಂಚಾರಿ ಗಸ್ತು ಪಡೆ ರಚಿಸಲಾಗಿದೆ. ಪ್ರಕರಣಗಳ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ಕಾರ್ಯ ಪ್ರವೃತವಾಗಲಿದ್ದು, ಸಾರ್ವ ಜನಿಕರು ಮಾಹಿತಿ ನೀಡಿ ಸಹಕರಿಸಬೇಕು’ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ಮನವಿ ಮಾಡಿದರು.

ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಅವರು, ‘ವರದಕ್ಷಿಣೆ, ದೌರ್ಜನ್ಯ, ಅತ್ಯಾಚಾರಕ್ಕೆ ಯತ್ನ, ಶಾಲಾ, ಕಾಲೇಜು ಯುವತಿಯರಿಗೆ ಚುಡಾಯಿಸುವುದು, ಕಿರುಕುಳ ನೀಡುವುದು ಸೇರಿದಂತೆ ಇತರೆ ಘಟನೆ ತಡೆಯುವುದು ಮಹಿಳಾ ಗಸ್ತು ಪಡೆಯ ಉದ್ದೇಶವಾಗಿದೆ. ಮಹಿಳೆಯರು ಮಕ್ಕಳು ಹೆಚ್ಚು ಸೇರುವ ಸ್ಥಳಗಳಲ್ಲಿ ಈ ಪಡೆ ಸಂಚರಿಸಲಿದೆ. ಈ ಪಡೆಯಲ್ಲಿ ಮಹಿಳಾ ಸಿಬ್ಬಂದಿ ಇರಲಿದ್ದಾರೆ’ ಎಂದರು.

‘ಮೃತ ಮಹಿಳೆಯ ಹೇಳಿಕೆಯನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಆರೋಪಿ ಇದಕ್ಕೂ ಮೊದಲು ಅತ್ಯಾಚಾರಕ್ಕೆ ಯತ್ನಿಸಿದ್ದ. ರಾಜಿ ಪಂಚಾಯಿತಿ ಮಾಡದೆ ಅಂದು ದೂರು ನೀಡಿದ್ದರೇ ಈ ಘಟನೆ ತಪ್ಪಿಸಬಹುದಾಗಿತ್ತು. ಮುಖ್ಯ ಆರೋಪಿ ಗಂಗಪ್ಪನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು’ ಎಂದು ಹೇಳಿದರು.

‘ತಾಲ್ಲೂಕಿನ ಮತ್ತೊಂದು ಗ್ರಾಮದಲ್ಲಿ ಇಂತಹದ್ದೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ ಎಂಬ ಮಾಹಿತಿ ದೊರಕಿದೆ. ಆರೋಪಿಯನ್ನು ಬಂಧಿಸಿದ್ದೇವೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲು ಠಾಣಾಧಿಕಾರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಪೊಲೀಸ್ ಇಲಾಖೆ ಸಾಕಷ್ಟು ಕಠಿಣ ಕ್ರಮ ಕೈಗೊಳ್ಳುತ್ತಿದೆ. ಕೆಲ ಕಡೆ ಮನೆಯ ಒಳಗಡೆ ಅಥವಾ ಹೊರಗಡೆ ಪೊಲೀಸರ ಕಣ್ತಪ್ಪಿ ಇಂತಹ ಘಟನೆ ನಡೆಯುತ್ತಿವೆ. ಈ ವಿಷಯದಲ್ಲಿ ಬಹುತೇಕವಾಗಿ ಜನರು ದೂರು ನೀಡಲು ಹಿಂದೇಟು ಹಾಕುತ್ತಾರೆ. ಎಷ್ಟೋ ದಿನಗಳ ನಂತರ ತಡವಾಗಿ ಬಂದು ದೂರು ನೀಡುತ್ತಾರೆ. ತಕ್ಷಣವೇ ಮಾಹಿತಿ ನೀಡದರೆ ಕ್ರಮಕೈಗೊಳ್ಳಲು ನಮಗೆ ಹೆಚ್ಚು ಅನುಕೂಲವಾಗಲಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಈ ನಿಟ್ಟಿನಲ್ಲಿ ಕೈಜೋಡಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT