ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಕ್ಮಾಪುರ ಗ್ರಾಮಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ

Last Updated 27 ಡಿಸೆಂಬರ್ 2019, 11:37 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ರುಕ್ಮಾಪುರ ಗ್ರಾಮಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಬುಧವಾರ ಭೇಟಿ ನೀಡಿದರು.

ಶಹಾಪುರದಲ್ಲಿಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ರುಕ್ಮಾಪುರದಲ್ಲಿರುವ ನಿವೃತ್ತ ಎಸ್.ಪಿ. ಚಂದ್ರಕಾಂತ ಭಂಡಾರೆಯವರ ಫಾರ್ಮ ಹೌಸ್‍ಗೆ ಬಂದು ಕೆಲ ಕಾಲ ಕಳೆದರು.

ಇತ್ತೀಚೆಗೆ ತನ್ನ
ಅಂಗಾಂಗಗಳ ದಾನ ಮಾಡಿ ಹಲವರ ಜೀವಕ್ಕೆ ವರವಾಗಿದ್ದ ಗ್ರಾಮದ ಬಡಗಾ ಕುಟುಂಬದ ಯುವಕ ಕಾರ್ತಿಕ ಕೀರಪ್ಪಾ ಬಡಗಾ ಕುಟುಂಬದವರಿಗೆ ಭೇಟಿ ಮಾಡಿ ಕಾರ್ತಿಕನ ಸಾವು ವ್ಯರ್ಥಗೊಳಿಸದೆ ಮಾನವೀಯವಾಗಿ ಯೋಚಿಸಿದ ಕುಟುಂಬ ವರ್ಗದ ಬಗ್ಗೆ ಮೆಚ್ಚುಗೆ
ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಎಸ್.ಪಿ. ಚಂದ್ರಕಾಂತ ಭಂಡಾರೆಯವರು ಆರೋಗ್ಯ ಸಚಿವರಿಗೆ ಬಡಗಾ ಕುಟುಂ ಬಕ್ಕೆ ನೆರವು ನೀಡುವಂತೆ ಮನವಿ ಮಾಡಿದರು.

ತಮ್ಮ ಆರೋಗ್ಯ ಇಲಾಖೆಯಿಂದ ಹಾಗು ಮುಖ್ಯಮಂತ್ರಿಗಳಿಂದ ಆರ್ಥಿಕ ನೆರವು ಕೊಡಿಸುವುದಾಗಿ ರಾಮುಲು ಭರವಸೆ ನೀಡಿದರು.

ಪೌರತ್ವ ಕಾಯಿದೆಯ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಮಾತನಾಡಿ, ‘ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಎಲ್ಲಾ ವಿಚಾರಿಸಿಯೇ ಈ ಕಾಯ್ದೆಯನ್ನು ರೂಪಿಸಿದ್ದಾರೆ. ಪೌರತ್ವ ಕಾಯಿದೆಯಿಂದ ದೇಶದಲ್ಲಿನ ಯಾವುದೇ ಧರ್ಮದವರಿಗೂ ತೊಂದರೆಯಾಗುವುದಿಲ್ಲ. ಇದರ ಬಗ್ಗೆ ಅನುಮಾನ ವ್ಯಕ್ತಪಡಿಸುವ ಅವಶ್ಯಕತೆಯಿಲ್ಲ’ ಎಂದರು.

‘ಸಂಕ್ರಾತಿ ಒಳಗಡೆಯೆ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ. ತಮಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ನಿಭಾಯಿಸುವುದಾಗಿ’ ತಿಳಿಸಿದರು.

‘ಪರಿಶಿಷ್ಟ ಪಂಗಡದ ಏಳಿಗೆಗಾಗಿ ಮೀಸಲಾತಿ ಹೆಚ್ಚಳ ಮಾಡುವ ಅವಶ್ಯಕತೆಯಿದೆ. ಇದರ ಕುರಿತು ಸರ್ಕಾರದಿಂದಲೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದರು.
ಕೆಪಿಸಿಸಿ ಸದಸ್ಯ ಡಾ.ರಂಗರಾಜ ವನದುರ್ಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT