ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಗ್ರಾಮೀಣರ ಮೇಲುಗೈ

ಗ್ರಾಮೀಣ ಭಾಗದಲ್ಲಿ ಶೇ 78.51 ಫಲಿತಾಂಶ ದಾಖಲು
Last Updated 24 ಮೇ 2022, 4:38 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ ಮಾರ್ಚ್‌–ಏಪ್ರಿಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಇದರಲ್ಲಿ ಸರ್ಕಾರಿ ಪ್ರೌಢಶಾಲೆಯ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಶಹಾ‍ಪುರ ತಾಲ್ಲೂಕಿನಲ್ಲಿ 38, ಸುರಪುರ ತಾಲ್ಲೂಕಿನಲ್ಲಿ 45, ಯಾದಗಿರಿ ತಾಲ್ಲೂಕಿನಲ್ಲಿ 39 ಸೇರಿದಂತೆ 122 ಸರ್ಕಾರಿ ಪ್ರೌಢಶಾಲೆಗಳಿವೆ.

ಜಿಲ್ಲೆಯಲ್ಲಿ 122 ಸರ್ಕಾರಿ, 15 ಅನುದಾನಿತ, 78 ಅನುದಾನ ರಹಿತ, 29 ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿ, ಒಟ್ಟು 244 ಪ್ರೌಢ ಶಾಲೆಗಳಿವೆ.

ಶೈಕ್ಷಣಿಕ ಇಲಾಖೆಯ ತಾಲ್ಲೂಕುಗಳ ಪ್ರಕಾರ ಮೂರು ತಾಲ್ಲೂಕುಗಳಲ್ಲಿ ಗ್ರಾಮೀಣ ಭಾಗದಲ್ಲಿ 10,051 ವಿದ್ಯಾರ್ಥಿಗಳಿದ್ದರೆ, 1,827 ನಗರ ಪ್ರದೇಶದ ವಿದ್ಯಾರ್ಥಿಗಳಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ 7,891, ನಗರ ಪ್ರದೇಶದಲ್ಲಿ 1,293 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ 78.51, ನಗರದಲ್ಲಿ ಶೇ 70.77 ರಷ್ಟು ಪ್ರತಿಶತ ಫಲಿತಾಂಶ ಬಂದಿದೆ.

ತಾಲ್ಲೂಕುವಾರು ವಿವರ:
ಶಹಾಪುರ ತಾಲ್ಲೂಕಿನಲ್ಲಿ ಗ್ರಾಮೀಣ, ನಗರದಲ್ಲಿ ಸೇರಿದಂತೆ 4,008 ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಭಾಗದಲ್ಲಿ 2,666 ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದಲ್ಲಿ 379 ಪಾಸಾಗಿದ್ದು, ಒಟ್ಟು 3,045 ಉತ್ತೀರ್ಣರಾಗಿದ್ದಾರೆ.

ಸುರಪುರ ತಾಲ್ಲೂಕಿನಲ್ಲಿ ಗ್ರಾಮೀಣ, ನಗರ ಭಾಗದಲ್ಲಿ 3,881 ವಿದ್ಯಾರ್ಥಿಗಳಿದ್ದು, ಗ್ರಾಮೀಣ ಭಾಗದಲ್ಲಿ 2,719 ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದಲ್ಲಿ 397 ಪಾಸಾಗಿದ್ದು, ಒಟ್ಟು 3,116 ಉತ್ತೀರ್ಣರಾಗಿದ್ದಾರೆ.

ಯಾದಗಿರಿ ತಾಲ್ಲೂಕಿನಲ್ಲಿ ಗ್ರಾಮೀಣ, ನಗರ ಭಾಗದಲ್ಲಿ 3,989 ವಿದ್ಯಾರ್ಥಿಗಳಿದ್ದು, ಗ್ರಾಮೀಣ ಭಾಗದಲ್ಲಿ 2,506 ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದಲ್ಲಿ 517 ಪಾಸಾಗಿದ್ದು, ಒಟ್ಟು 3,023 ಉತ್ತೀರ್ಣರಾಗಿದ್ದಾರೆ.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಈ ಬಾರಿಯೂ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದು, ಶಿಕ್ಷಕರು ಶ್ರಮ ಇದೆ. ಮುಂದಿನ ದಿನಗಳಲ್ಲಿ ಹೆಚ್ಚು ಸಾಧನೆ ಮಾಡಲು ಪ್ರೇರೆಣೆ ಸಿಕ್ಕಿದೆ ಎನ್ನುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಮಾತಾಗಿದೆ.

ಅನುದಾನ ಸಹಿತ ಶಾಲೆಗಳ ವಿವರ:
ಜಿಲ್ಲೆಯಲ್ಲಿ ಅನುದಾನಿತ 15 ಪ್ರೌಢಶಾಲೆಗಳಿದ್ದು, ಉತ್ತಮ ಸಾಧನೆ ಮಾಡಿವೆ. ಶಹಾಪುರ ತಾಲ್ಲೂಕಿನಲ್ಲಿ ಶೇ 71.30, ಸುರಪುರ ತಾಲ್ಲೂಕಿನಲ್ಲಿ ಶೇ 81.41, ಯಾದಗಿರಿ ತಾಲ್ಲೂಕಿನಲ್ಲಿ ಶೇ 73.79 ಸೇರಿದಂತೆ ಶೇ 75.25 ಫಲಿತಾಂಶ ಬಂದಿದೆ.

ಅನುದಾನ ರಹಿತ ಶಾಲೆಗಳ ವಿವರ:
ಜಿಲ್ಲೆಯಲ್ಲಿ 78 ಅನುದಾನ ರಹಿತ ಪ್ರೌಢಶಾಲೆಗಳಿವೆ. ಶಹಾಪುರ ತಾಲ್ಲೂಕಿನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ 782, ಸುರಪುರ ತಾಲ್ಲೂಕಿನಲ್ಲಿ 801, ಯಾದಗಿರಿ ತಾಲ್ಲೂಕಿನಲ್ಲಿ 1,385 ಸೇರಿದಂತೆ 2,968 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶಹಾಪುರ ತಾಲ್ಲೂಕಿನಲ್ಲಿ ಶೇ 83.73, ಸುರಪುರ ತಾಲ್ಲೂಕಿನಲ್ಲಿ ಶೇ 82.15, ಯಾದಗಿರಿ ತಾಲ್ಲೂಕಿನಲ್ಲಿ ಶೇ 85.92 ಸೇರಿದಂತೆ ಶೇ 84.29 ಪ್ರತಿಶತ ಫಲಿತಾಂಶ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT