ವಡಗೇರಾ: ಕಲ್ಲಂಗಡಿ ಬೆಲೆ ದಿಢೀರ್ ಕುಸಿತದಿಂದಾಗಿ ತಾಲ್ಲೂಕು ವ್ಯಾಪ್ತಿಯ ಕಲ್ಲಂಗಡಿ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

ಈ ವರ್ಷದ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಗುಣಮಟ್ಟದ ಒಂದು ಕೆ.ಜಿ. ಕಲ್ಲಂಗಡಿ ₹ 25ರಿಂದ ₹ 30ಯಲ್ಲಿ ಮಾರಾಟ ಆಗಿತ್ತು. ಮಾರ್ಚ್ ತಿಂಗಳ ಮೊದಲ ವಾರದಿಂದ ಏಕಾಏಕಿ ದರ ಕುಸಿತವಾಗಿ, ಒಂದು ಕೆ.ಜಿ ಕಲ್ಲಂಗಡಿ ₹ 6ರಿಂದ ₹10ಕ್ಕೆ ಇಳಿದಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಕೆಲವು ರೈತರು ಸ್ವಂತ ಜಮೀನಿನಲ್ಲಿ ಬೆಳೆ ಬೆಳೆದಿದ್ದರೆ, ಮತ್ತೆ ಕೆಲವರು ಜಮೀನು ಲೀಜ್ಗೆ ಪಡೆದುಕೊಂಡು ಸಾಲ ಮಾಡಿ ಕಲ್ಲಂಗಡಿ ಬೆಳೆ ಬೆಳೆದಿದ್ದಾರೆ. ಕಲ್ಲಂಗಡಿ ಬಿತ್ತನೆ ಮಾಡಲು ರೈತರು ಜಮೀನು ಹದಗೊಳಿಸುವುದು, ಹನಿ ನೀರಾವರಿಗೆ ಡ್ರಿಪ್ ವ್ಯವಸ್ಥೆ, ಮೆಲ್ಟಿಂಗ್ ಪೇಪರ್ ಹಾಕಿ ಸಸಿಗಳನ್ನು ನಾಟಿ ಮಾಡಿದ್ದಾರೆ. ನಾಟಿ ಮತ್ತು ಬೆಳೆ ಆರೈಕೆಗಾಗಿ ಎಕರೆಗೆ ₹80 ಸಾವಿರದಷ್ಟು ಖರ್ಚು ಮಾಡಿದ್ದಾರೆ.

ಮಾರುಕಟ್ಟೆಗೆ ಏಕಕಾಲಕ್ಕೆ ಹೇರಳವಾದ ಕಲ್ಲಂಗಡಿ ಬಂದಿದೆ. ಬಿಸಿಲಿನ ಪ್ರಖರತೆಯ ನಡುವೆಯೂ ಕಲ್ಲಂಗಡಿ ಬೆಲೆ ಕುಸಿದಿರುವುದರಿಂದ ಸಾಲ ಮಾಡಿ, ಜಮೀನು ಲೀಜ್ಗೆ ಪಡೆದ ಹಣವನ್ನು ಹೇಗೆ ಮರು ಪಾವತಿ ಮಾಡಬೇಕು ಎಂಬ ಚಿಂತೆಯೂ ಬೆಳೆಗಾರರನ್ನು ಕಾಡುತ್ತಿದೆ.

ತೋಟಗಾರಿಕೆ ಮಾಡಿಕೊಳ್ಳಲು ಸರ್ಕಾರ ಸಾಕಷ್ಟು ಯೋಜನೆಗಳ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ. ಆದರೆ, ತೋಟಗಾರಿಕಾ ಬೆಳೆಗಳು ಬೆಳೆದ ಮೇಲೆ ಸರಿಯಾದ ಬೆಂಬಲ ಬೆಲೆ ಸಿಗದಿದ್ದರೆ, ಮಾರುಕಟ್ಟೆ ಸಿಗದೆ ಇದ್ದರೆ ಏನು ಪ್ರಯೋಜನ? ಕಲ್ಲಂಗಡಿ ಬೆಳೆದ ರೈತರಿಂದ ಖರೀದಿಸಿ, ಅದನ್ನು ಮಾರಾಟ ಮಾಡುತ್ತಿರುವ ವರ್ತಕರು ಉತ್ತಮ ಲಾಭ ಪಡೆಯುತಿದ್ದರೆ, ಬೆಳೆಗಾರರು ಸಂಕಷ್ಟದಲ್ಲ ಇದ್ದಾರೆ ಎನ್ನುತ್ತಾರೆ ಬೆಳೆಗಾರರು.

ಜಿಲ್ಲಾಡಳಿತ, ಸಚಿವರು, ಶಾಸಕರು ಕಲ್ಲಂಗಡಿ ಬೆಳೆದ ರೈತರ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಬೆಂಬಲ ಬೆಲೆ ನಿಗದಿ ಮಾಡುವುದರ ಜತೆಗೆ ಬೆಳೆ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಸೆಯಾಗಿದೆ.

ಲೀಸ್ ಮೇಲೆ 4 ಎಕರೆ ಜಮೀನು ಪಡೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಲ್ಲಂಗಡಿ ಬೆಳೆದೆ. ಈಗ ಬೆಲೆ ಕುಸಿದಿದ್ದು ಮಾಡಿದ ಸಾಲ ತೀರಿಸಲು ಆಗುತ್ತಿಲ್ಲ.
- ನಿಂಗಣ್ಣ ಕರಡಿ ಯಕ್ಷಿಂತಿ, ಕಲ್ಲಂಗಡಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.