ಸುರಪುರ: ‘ಜನಗಣತಿ-2027 ಕಾರ್ಯವನ್ನು ತಾಲ್ಲೂಕಿನಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದಿನಿಂದ ಸ್ವಯಂ-ಗಣತಿ ಪ್ರಕ್ರಿಯೆ ಪ್ರಾರಂಭವಾಗಲಿದೆ’ ಎಂದು ತಹಶೀಲ್ದಾರ್ ಎಚ್.ಎ.ಸರಕವಾಸ್ ಹೇಳಿದರು.

ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಕೇಂದ್ರ ಸರ್ಕಾರ ಎರಡು ಹಂತಗಳಲ್ಲಿ ಜನಗಣತಿ ನಡೆಸಲು ಅಧಿಸೂಚನೆ ಹೊರಡಿಸಿದೆ. ಅದರನ್ವಯ ಸ್ವಯಂ ಗಣತಿ ನಂತರ ಏ.16 ರಿಂದ ಮೇ.15 ರವರೆಗೆ ಮನೆ ಗಣತಿ. 2027ರಲ್ಲಿ ಎರಡನೇ ಹಂತದಲ್ಲಿ ಜನಗಣತಿ ನಡೆಯುತ್ತದೆ’ ಎಂದು ತಿಳಿಸಿದರು.

‘ಸ್ವಯಂ-ಗಣತಿ ಕಾರ್ಯ ಏ.1 ರಿಂದ ಏ.15 ರವರೆಗೆ ನಡೆಯಲಿದೆ. ಜನರು ತಮ್ಮ ವಿವರಗಳನ್ನು ಜನಗಣತಿಯ ವೆಬ್ನಲ್ಲಿ ಭರ್ತಿ ಮಾಡಿಕೊಳ್ಳಬೇಕು. ಮೊಬೈಲ್ ಮತ್ತು ಒಟಿಪಿ ಬಳಸಿ ಲಾಗಿನ್ ಮಾಡಿಕೊಳ್ಳಬೇಕು. ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ನಕ್ಷೆಯಲ್ಲಿ ಮನೆಯನ್ನು ಗುರುತಿಸಬೇಕು. ಮನೆಯ-ಕುಟುಂಬದ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಿ ತಮ್ಮ ಎಸ್ಇ ರೆಫರೆನ್ಸ್ ಐಡಿ ಪಡೆಯಬೇಕು’ ಎಂದು ಮಾಹಿತಿ ನೀಡಿದರು.

‘ಗಣತಿದಾರರು ಏ.16 ರಿಂದ ಮೇ.15 ರವರೆಗೆ ತಮಗೆ ಹಂಚಿಕೆ ಮಾಡಲಾದ ಬ್ಲಾಕ್ಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿರುವ 33 ಪ್ರಶ್ನಾವಳಿಗಳಿಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಜನಗಣತಿ ಕಾರ್ಯಕ್ಕೆ ಅಧಿಕಾರಿಗಳನ್ನು ನೇಮಿಸಲಾಗಿದೆ. 526-ಗಣತಿದಾರರು, 90-ಮೇಲ್ವಿಚಾರಕರಿರುತ್ತಾರೆ. ಗ್ರಾಮೀಣ (ಸುರಪುರ)-ತಹಶೀಲ್ದಾರ್, ನಗರ (ಸುರಪುರ)-ಪೌರಾಯುಕ್ತ, ಕಕ್ಕೇರಾ ಪುರಸಭೆ, ಕೆಂಭಾವಿ ಪುರಸಭೆಗೆ ಮುಖ್ಯಾಧಿಕಾರಿಗಳು ಚಾರ್ಜ್ ಅಧಿಕಾರಿಗಳಾಗಿರುತ್ತಾರೆ’ ಎಂದು ವಿವರಿಸಿದರು.

‘ಜನಗಣತಿ -2027 ಭಾರತದ ಅತಿದೊಡ್ಡ ಸಾರ್ವಜನಿಕ ಭಾಗವಹಿಸುವಿಕೆಯ ಚಟುವಟಿಕೆಯಾಗಿದೆ. ಇದು ಎಣಿಕೆಯಲ್ಲ, ಇದು ವಿಕಸಿತ ಭಾರತ–2047ರ ಅಡಿಪಾಯವಾಗಿದೆ. ದೇಶದಲ್ಲಿ 1881ರಲ್ಲಿ ಮೊದಲ ಜನಗಣತಿ ನಡೆದಿದ್ದು ಈಗ ನಡೆಯುತ್ತಿರುವ ಜನಗಣತಿ 16ನೇಯದು ಮತ್ತು ಸ್ವಾತಂತ್ರ್ಯ ನಂತರದ 8ನೇ ಜನಗಣತಿ ಆಗಿದೆ’ ಎಂದು ಹೇಳಿದರು.

‘ದೇಶದ ಭವಿಷ್ಯದ ನೀತಿಗಳಿಗೆ ನಿಖರವಾದ ಆಧಾರ. ಸಂಪನ್ಮೂಲಗಳ ನ್ಯಾಯಯುತ ವಿತರಣೆ. ಸರಿಯಾದ ಸ್ಥಳದಲ್ಲಿ ಸೂಕ್ತ ಯೋಜನೆಗಳು. ಉತ್ತಮ ಶಾಲೆಗಳು, ಆಸ್ಪತ್ರೆಗಳು ಮತ್ತು ರಸ್ತೆಗಳು, ಪ್ರತಿ ವರ್ಗ ಮತ್ತು ಪ್ರದೇಶದ ಸರಿಯಾದ ಅಭಿವೃದ್ಧಿ ಜನಗಣತಿಯ ಪ್ರಯೋಜನಗಳಾಗಿವೆ’ ಎಂದು ತಿಳಿಸಿದರು.

ಎಫ್ಡಿಎ ಗುರುಬಸಪ್ಪ ಪಾಟೀಲ, ತಾಂತ್ರಿಕ ಸಹಾಯಕ ಭೀಮರಾಯ್ ಯಾದವ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-30-1589130552

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.