ಸುರಪುರ: ‘ಅಸ್ಪೃಶ್ಯತೆ, ಅಸಮಾನತೆ, ದೀನ ದಲಿತರ, ದುರ್ಬಲರ ಶೋಷಣೆಯ ವಿರುದ್ಧ ನಿರಂತರ ಹೋರಾಟ ಮಾಡಿದ ಧೀಮಂತ ನಾಯಕ ಅಂಬೇಡ್ಕರ್. ಅವರು ಶೋಷಿತ ಸಮುದಾಯಗಳ ಆಶಾಕಿರಣ’ ಎಂದು ವಕೀಲ ನಂದನಗೌಡ ಪಾಟೀಲ ಹೇಳಿದರು.

ನಗರದ ವಕೀಲರ ಸಂಘದಲ್ಲಿ ಆಯೋಜಿಸಿದ್ದ ಅಂಬೇಂಡ್ಕರ್ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ದೇಶ ವಿದೇಶಗಳಲ್ಲಿ ಅಭ್ಯಾಸ ಮಾಡಿ ಅತ್ಯುನ್ನತ ಪದವಿ ಪಡೆದುಕೊಂಡಿದ್ದರು. ತನ್ನ ಸಮುದಾಯ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಶಿಕ್ಷಣದಿಂದಲೇ ಪರಿಹಾರ ಸಾಧ್ಯ ಎಂಬುದನ್ನು ಮನಗಂಡಿದ್ದರು. ಅಂತೆಯೇ ಅವರು ಎಲ್ಲರು ಶಿಕ್ಷಣವಂತರಾಗಿ ಎಂದು ಕರೆ ನೀಡಿದ್ದರು’ ಎಂದರು.

ವಕೀಲ ದೇವಿಂದ್ರಪ್ಪ ಬೇವಿನಕಟ್ಟಿ ಮಾತನಾಡಿ, ‘ಶಿಕ್ಷಣ, ಸಂಘಟನೆ, ಹೋರಾಟ ಅವರ ಧ್ಯೇಯ ವಾಕ್ಯಗಳಾಗಿದ್ದವು. ಅಸ್ಪೃಶ್ಯತೆ ವಿರುದ್ಧ ತಮ್ಮ ಜೀವಿತಾವಧಿಯವರೆಗೆ ಹೋರಾಟ ಮಾಡಿದ್ದರು. ಶಿಕ್ಷಣದಿಂದಲೇ ಸಮಾನತೆ ಮತ್ತು ಹಕ್ಕು ಪಡೆಯಲು ಸಾಧ್ಯ ಎಂಬುದು ಅವರ ಸಿದ್ಧಾಂತವಾಗಿತ್ತು’ ಎಂದರು.

ವಕೀಲ ವೆಂಕಾರೆಡ್ಡಿ ಬೋನ್ಹಾಳ, ವಿಶ್ವಾಮಿತ್ರ ಕಟ್ಟಿಮನಿ, ಚನ್ನಪ್ಪ ಹೂಗಾರ ಮಾತನಾಡಿದರು.

ಸರ್ಕಾರಿ ವಕೀಲರಾದ ವೆಂಕೋಬ ದೇಸಾಯಿ, ಮಂಜುನಾಥ ಹುದ್ದಾರ, ವೆಂಕಟೇಶ ಅರ್ಚಕ, ಹನುಮಂತ ಗೋನಾಲ, ನ್ಯಾಯಾಲಯದ ಶಿರಸ್ತೇದಾರ ನಿಂಗಣ್ಣ ಕುಂಬಾರ, ಸಂದೀಪ ಜಾಲಹಳ್ಳಿ, ಮುರ್ತುಜಾ ಪಟೇಲ್, ಪರುಶುರಾಮ ಲಕ್ಷ್ಮೀಪುರ, ಮುಖಂಡರಾದ ಹಣಮಂತ ಭದ್ರಾವತಿ, ತಾಹೇರ ಹುಸೇನ ಸೌದಾಗರ್ ಸೇರಿದಂತೆ ಇತರರು ಹಾಜರಿದ್ದರು. ಆದಪ್ಪ ಹೊಸಮನಿ ಸ್ವಾಗತಿಸಿದರು. ಗೋಪಾಲ ತಳವಾರ ನಿರೂಪಿಸಿದರು. ಮಂಜುನಾಥ ಗುಡುಗುಂಟಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-30-44575608

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.