ಸುರಪುರ: ನಗರ ಸೇರಿದಂತೆ ಸುತ್ತಲಿನ ವ್ಯಾಪ್ತಿಯಲ್ಲಿ ಮುಸ್ಲಿಂ ಬಾಂಧವರು ಪವಿತ್ರ ಹಬ್ಬವಾದ ಬಕ್ರೀದ್ ಗುರುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ನಗರದ ಈದ್ಗಾ ಮೈದಾನಲ್ಲಿ ಬಕ್ರೀದ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಲು ವಿವಿಧ ಮಸೀದಿಗಳು ಹಾಗೂ ಸುತ್ತಲಿನ ಗ್ರಾಮಗಳಿಂದ ಮುಸ್ಲಿಂ ಬಾಂಧವರು ಸೇರಿದರು. ಹಾಫೀಸ್ ಅಕ್ಬರ್ ಅಲಿ ಗೋಗಿ ಅವರು ಪ್ರಾರ್ಥನೆಯನ್ನು ನೆರವೇರಿಸಿದರು.

ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನಗಳ ಪ್ರತೀಕವಾಗಿದೆ. ಮಾನವ ಕುಲಕ್ಕೆ ಶಾಂತಿ, ನೆಮ್ಮದಿ ಲಭಿಸಲಿ ವಿಶ್ವದಾದ್ಯಂತ ತಲೆದೂರಿದ ಬಿಕ್ಕಟ್ಟು ಕೂಡಲೇ ಶಮನವಾಗಲಿ. ಮನುಕುಲದ ಒಳಿತಿಗಾಗಿ ಪರಸ್ಪರರಲ್ಲಿ ಸೌಹಾರ್ದ ಭಾವನೆ ಹೆಚ್ಚಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆಯ ನಂತರ ಮುಸ್ಲಿಂ ಬಾಂಧವರು ತಮ್ಮ ಶಕ್ತಿ ಅನುಸಾರ ದಾನ ಮಾಡಿದರು.

ಪ್ರಾರ್ಥನೆಯಲ್ಲಿ ಪ್ರಮುಖರಾದ ಸೈಯದ್ ಅಹಮದ್ ಪಾಶಾ ಖಾದ್ರಿ, ಈದ್ಗಾ ಸಮಿತಿ ಅಧ್ಯಕ್ಷ ಎ.ಆರ್ ಪಾಷಾ ಅಹಮದ್ ಪಠಾಣ್, ಖಾಜಾ ಖಲೀಲ್ ಅಹಮದ್ ಅರಕೇರಿ, ಉಸ್ತಾದ್ ವಜಾಹತ್ ಹುಸೇನ್, ಲಿಯಾಕತ್ ಹುಸೇನ್, ಉಸ್ತಾದ್ ಅಬ್ದುಲ್ ಮುಲ್ಲಾ, ತೌಫಿಕ್ ಅಹಮದ್ ಅರಕೇರಿ, ಮೆಹಬೂಬ್ ಸಾಬ್ ಜಮಾದಾರ್, ಅನ್ವರ್ ಜಮಾದಾರ್, ಖಾದರ್ ಪಟೇಲ್, ಲಾಲಸಾಬ್ ಇಮ್ತಿಯಾಜ್ ಹುಸೇನ್ ಸೇರಿದಂತೆ ಹಲವರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-30-1026990310

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.