ಸುರಪುರ: ‘ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದದಿಂದ ಆಚರಿಸಬೇಕು. ಸುರಪುರ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಹೆಸರಾದ ಊರು. ಇಲ್ಲಿ ಹಿಂದೆ ಯಾವುದೇ ಗಲಭೆಗಳು ನಡೆದಿಲ್ಲ. ಅದೇ ಸಂಪ್ರದಾಯವನ್ನು ಈ ಬಾರಿಯೂ ಮುಂದುವರಿಸಿ’ ಎಂದು ಪೊಲೀಸ್ ಇನ್ಸ್ಪೆಕ್ಟರ್ ಉಮೇಶ ನಾಯಕ ಹೇಳಿದರು. ನಗರದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಜರುಗಿದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಭಾಗವಹಿಸಿದ ವಿವಿಧ ಸಮುದಾಯಗಳ ಮುಖಂಡರು ಮಾತನಾಡಿ, ‘ಸುರಪುರ ಕೋಮು ಸೌಹಾರ್ದಕ್ಕೆ ಹೆಸರಾಗಿದೆ. ಹಿಂದು-ಮುಸ್ಲಿಂ ಸಹೋದರತ್ವ ಭಾವನೆಯನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ಎಲ್ಲಾ ಹಬ್ಬಗಳನ್ನು ಪ್ರತಿ ವರ್ಷ ಶಾಂತಿ, ಸೌಹಾರ್ದವಾಗಿ ಆಚರಿಸುತ್ತವೆ’ ಎಂದು ತಿಳಿಸಿದರು.

ಪಿಎಸ್ಐ ಸಿದ್ದಣ್ಣ ಯಡ್ರಾಮಿ, ಮುಖಂಡರಾದ ಅಹ್ಮದ್ ಪಠಾಣ, ಅಬ್ದುಲ್ ಗಫಾರ್ ನಗನೂರಿ, ಹಣಮಂತ ಕಟ್ಟಿಮನಿ ಬೊಮ್ಮನಳ್ಳಿ, ವೆಂಕಟೇಶ ನಾಯಕ ಬೈರಿಮರಡಿ ಸೇರಿ ಇನ್ನಿತರರು ಮಾತನಾಡಿದರು.

ಈ ಸಂದರ್ಭದಲ್ಲಿ ಖಾಜಾ ಖಲೀಲ್ ಅಹ್ಮದ್ ಅರಕೇರಿ, ಖಾಲೀದ್ ಅಹ್ಮದ್ ತಾಳಿಕೋಟಿ, ಮಹ್ಮದ್ ಶರೀಫ್, ಮಲ್ಲು ಬಿಲ್ಲವ್, ಭೀಮು ನಾಯಕ ಮಲ್ಲಿಬಾವಿ, ಶೇಖ ಮಹಿಬೂಬ ಒಂಟಿ, ಕಮರುದ್ದೀನ್ ನಾರಾಯಣಪೇಟೆ, ಶಕೀಲ್ ಅಹ್ಮದ್ ಖುರೇಷಿ, ಅಮ್ಜದ್ ಖುರೇಶಿ, ಅಬೀದ್ ಹುಸೇನ್ ಪಗಡಿ ಇತರರು ಉಪಸ್ಥಿತರಿದ್ದರು. ದಯಾನಂದ ಜಮಾದಾರ ಸ್ವಾಗತಿಸಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-30-449214035

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.