ಸುರಪುರ: ಇಲ್ಲಿಯ ತಾಲೂಕು ಕಟ್ಟಡ ಸಾಮಾಗ್ರಿಗಳ ಮಾರಾಟಗಾರ ಮಾಲೀಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿದೆ. ಮಲ್ಲಣ್ಣ ಸಾಹುಕಾರ ಮುಧೋಳ ನರಸಿಂಗಪೇಟೆ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಮೀಪದ ರಂಗಂಪೇಟೆಯ ಈಶ್ವರ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಭಾನುವಾರ ತಾಲ್ಲೂಕು ಕಟ್ಟಡ ಸಾಮಾಗ್ರಿಗಳ ಮಾರಾಟಗಾರ ಮಾಲೀಕರ ಸಭೆ ನಡೆಯಿತು. ಸರ್ಕಾರದ ನಿಯಮಗಳ ಪ್ರಕಾರ ಸಂಘವನ್ನು ನೋಂದಾಯಿಸಲಾಗಿದೆ. ಸಂಘ ಸ್ಥಾಪನೆ ಮತ್ತು ಪದಾಧಿಕಾರಿಗಳ ಬಗ್ಗೆ ಚರ್ಚಿಸಿದಾಗ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಸಂಘಕ್ಕೆ ತಾಲ್ಲೂಕು ಕಟ್ಟಡ ಸಾಮಾಗ್ರಿಗಳ ಮಾರಾಟಗಾರ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಎಂದು ನಾಮಕರಣ ಮಾಡಿಕೊಳ್ಳಲಾಯಿತು.

ಮಲ್ಲಣ್ಣ ಸಾಹುಕಾರ ಮುಧೋಳ ಅಧ್ಯಕ್ಷರಾಗಿ ಮತ್ತು ಮಲ್ಲಿಕಾರ್ಜುನ ವಿರುಪಾಕ್ಷಪ್ಪ ಸಜ್ಜನ್ ಪ್ರಧಾನ ಕಾರ್ಯದರ್ಶಿಯಾಗಿ ಎಲ್ಲರ ಒಪ್ಪಿಗೆ ಮೇರೆಗೆ ನೇಮಿಸಲಾಯಿತು ಮತ್ತು ಸಂಘದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಎಲ್ಲರೂ ಸಂಘಕ್ಕೆ ಒಳ್ಳೆಯ ರೀತಿಯಿಂದ ಕೆಲಸ ಮಾಡಲು ಒಗ್ಗೂಡಿ ಶ್ರಮಿಸಲು ನಿರ್ಧರಿಸಲಾಯಿತು. ಸಂಘದ ಬಲವರ್ಧನೆಗೆ ಪ್ರಾಮಾಣಿಕವಾಗಿ ಸೇವೆಗೈಯುವುದಾಗಿ ಪದಾಧಿಕಾರಿಗಳು ಭರವಸೆ ನೀಡಿದರು.

ಜೋಧರಾಯ ಚೌಧರಿ (ಗೌರವಾಧ್ಯಕ್ಷ), ಮಲ್ಲಣ್ಣ ಸಾಹುಕಾರ ಮುಧೋಳ(ಅಧ್ಯಕ್ಷ), ಯಂಕಣ್ಣ ಗದ್ವಾಲ್, ನಿಖಿಲ್ ದತ್ತುರಾವ್ (ಉಪಾಧ್ಯಕ್ಷರು), ಮಲ್ಲಿಕಾರ್ಜುನ ವಿರುಪಾಕ್ಷಪ್ಪ ಸಜ್ಜನ್ (ಪ್ರಧಾನ ಕಾರ್ಯದರ್ಶಿ), ವಿಜಯಕುಮಾರ ಕಡೇಚೂರು (ಸಹ ಕಾರ್ಯದರ್ಶಿ), ಶಕೀಲ್ ಅಬ್ದುಲ್ ರಹೆಮಾನ್ (ಖಜಾಂಚಿ), ಮೌನೇಶ್ ನಗರಗುಂಡ (ಉಪ ಖಜಾಂಚಿ), ಸಿದ್ದಣ್ಣ ಸಾಹುಕಾರ ಮುಧೋಳ, ನಿಂಗಣ್ಣ ಶರಬಣ್ಣ ಹೊಸಮನಿ, ರಮೇಶಕುಮಾರ ಪಂಚಾರಾಮ, ಮಹೇಂದ್ರಸಿಂಗ್, ಮೊಹಸೀನ್ ಶಕೀಲ್ ಅಹ್ಮದ್, ತಿರುಪತಿ ತ್ರಿವೇದಿ, ನಾಗರಾಜ ಪೂಜಾರಿ (ಕಾರ್ಯಕಾರಿ ಸಮಿತಿ ಸದಸ್ಯರು).

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-30-509604736

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.