ಸುರಪುರ: ‘ನಗರಸಭೆ ವ್ಯಾಪ್ತಿಯ 27ನೇ ವಾರ್ಡ್ ಮಹಿಬೂಬ ನಗರ ದರ್ಗಾ ಏರಿಯಾ ಗಬ್ಬೆದ್ದು ನಾರುತ್ತಿದೆ. ತಿಂಗಳುಗಳಿಂದ ಚರಂಡಿ ಸ್ವಚ್ಛಗೊಳಿಸಿಲ್ಲ. ಇದರಿಂದ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ’ ಎಂದು ವಾರ್ಡ್ ನಿವಾಸಿ ಮಲ್ಲು ವಿಷ್ಣುಸೇನಾ ತಿಳಿಸಿದ್ದಾರೆ.

‘ನಗರಸಭೆ ಸದಸ್ಯರ ಆಡಳಿತ ಈಗ ಇಲ್ಲ. ಜಿಲ್ಲಾಧಿಕಾರಿ ನಗರಸಭೆಯ ಆಡಳಿತಾಧಿಕಾರಿಯಾಗಿದ್ದಾರೆ. ನಿವಾಸಿಗಳಿಗೆ ಜಿಲ್ಲಾಧಿಕಾರಿ ಹತ್ತಿರ ಹೋಗಲು ಆಗುವುದಿಲ್ಲ. ನಗರಸಭೆ ಪೌರಾಯುಕ್ತರಿಗೆ ನೀಡಿದ ಮನವಿಗಳು ಕಸದಬುಟ್ಟಿ ಸೇರಿವೆ’ ಎಂದು ಆರೋಪಿಸಿದ್ದಾರೆ.

ಚರಂಡಿಗಳು ತುಂಬಿ ರಸ್ತೆ ಮೇಲೆ ಗಲೀಜು ನೀರು ಹರಿಯುತ್ತಿದೆ. ಪೌರಕಾರ್ಮಿಕರು ಕಸ ಗುಡಿಸದಿರುವುದರಿಂದ ತ್ಯಾಜ್ಯ ಎಲ್ಲೆಂದರಲ್ಲಿ ಸಂಗ್ರಹವಾಗಿದೆ. ಅಲ್ಲಲ್ಲಿ ಜಾಲಿ ಗಿಡಗಳು ಬೆಳೆದಿವೆ. ನಾಗರಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.

ಮಾರ್ಕಂಡೇಶ್ವರ ಗುಡಿಗೆ ನಿತ್ಯ ನೂರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಗುಡಿಯ ಸುತ್ತಮುತ್ತ ನೈರ್ಮಲ್ಯ ಮರೀಚಿಕೆಯಾಗಿದೆ. ರಸ್ತೆಗಳು ಹದಗೆಟ್ಟಿದ್ದು ಮಕ್ಕಳು, ವೃದ್ಧರು ಬಿದ್ದ ನಿದರ್ಶನಗಳಿವೆ.

ವಾರ್ಡ್ ನಿವಾಸಿಗಳು ಮನೆ ಕರ, ನೀರಿನ ಕರ, ತ್ಯಾಜ್ಯದ ಕರ ಕಟ್ಟಿದರೂ ಮೂಲಸೌಕರ್ಯ ಒದಗಿಸುತ್ತಿಲ್ಲ. ದ್ವಿತೀಯ ದರ್ಜೆಯ ನಾಗರಿಕರಾಗಿ ಬಾಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳಲ್ಲಿ ಸೊಳ್ಳೆ ಉತ್ಪತ್ತಿಯಾಗಿ ರೋಗ ಹರಡುವ ತಾಣಗಳಾಗಿವೆ.

ಈಗ ಮದುವೆ ಸುಗ್ಗಿ. ಬೀಗರು, ನೆಂಟರು ಮನೆಗೆ ಬರುತ್ತಾರೆ. ಹಲವರು ಮನೆಯ ಮುಂದೆಯೇ ಮದುವೆ ಇಟ್ಟುಕೊಂಡಿದ್ದಾರೆ. ಸ್ವಚ್ಛತೆ ಇರದಿರುವುದರಿಂದ ಮದುವೆಗೆ ಹಾಜರಾಗಲು ನೆಂಟರು, ಸ್ನೇಹಿತರು ಹಿಂಜರಿಯುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.

ನಗರಸಭೆಗೆ ಮನವಿ ನೀಡಿ ಬೇಸತ್ತ ನಾಗರಿಕರು ಒಂದು ನಿರ್ಧಾರಕ್ಕೆ ಬಂದರು. ಪ್ರತಿ ಮನೆಯ ಯುವಕರು ಪಿಕಾಸಿ, ಬುಟ್ಟಿ ತೆಗೆದುಕೊಂಡು ತಾವೇ ಚರಂಡಿ ಸ್ವಚ್ಛಗೊಳಿಸುತ್ತಿದ್ದಾರೆ. ಚರಂಡಿಯ ತ್ಯಾಜ್ಯ ತೆಗೆದು ಬುಟ್ಟಿಯಲ್ಲಿ ಹೊತ್ತುಕೊಂಡು ದೂರದಲ್ಲಿ ಹಾಕಿ ಬರುತ್ತಿದ್ದಾರೆ.

ಈ ದೃಶ್ಯಗಳನ್ನು ಯುವಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಿಗೆ ನೂರಾರು ಕಾಮೆಂಟ್ಗಳು ಬಂದಿದ್ದು ಎಲ್ಲರೂ ನಗರಸಭೆಗೆ ಹಿಡಿಶಾಪ ಹಾಕಿದ್ದಾರೆ.

ಈಗಲಾದರೂ ನಗರಸಭೆ ಎಚ್ಚೆತ್ತುಕೊಂಡು ಇಡೀ ವಾರ್ಡ್ನ್ನು ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪೌಡರ್ ಹಾಕಿ, ಫಾಗಿಂಗ್ ಮಾಡಿಸಬೇಕೆಂದು ಮಲ್ಲು ವಿಷ್ಣುಸೇನಾ ಸೇರಿದಂತೆ ವಾರ್ಡ್ನ ನಾಗರಿಕರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-30-1826810486

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.