ಸುರಪುರ: ನಗರಕ್ಕೆ ಸಿಟಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡ ಪ್ರಕಾಶ ಅಲಬನೂರ ಅವರು ಬುಧವಾರ ಬಸ್ ಘಟಕ ವ್ಯವಸ್ಥಾಪಕ ವಿಠ್ಠಲ ಕದಂ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಪ್ರಕಾಶ ಅಲಬನೂರ ಮಾತನಾಡಿ, ‘ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಸಿಟಿ ಬಸ್ ಇಲ್ಲದ ಕಾರಣ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಲಕ್ಷ್ಮೀಪುರ, ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತ, ತಿಮ್ಮಾಪುರ ಬಸ್ ನಿಲ್ದಾಣದಿಂದ ಸುರಪುರಕ್ಕೆ ಬರುವ ಸಾರ್ವಜನಿಕರು ಆಟೊಗಳಿಗೆ ಹೆಚ್ಚಿನ ಹಣ ನೀಡಿ ಬರಬೇಕಾದ ಅನಿವಾರ್ಯತೆ ಇದೆ’ ಎಂದರು.

‘ನಗರದ ಸಮೀಪವಿರುವ ಲಕ್ಷ್ಮೀಪುರ, ಸತ್ಯಂಪೇಟ, ರುಕ್ಮಾಪುರ, ಕವಡಿಮಟ್ಟಿ, ಸರ್ಕಾರಿ ಪದವಿ ಕಾಲೇಜು, ಕೋರ್ಟ್, ತಹಶೀಲ್ದಾರ್ ಕಚೇರಿ, ಜಾಲಿಬೆಂಚಿ ಗ್ರಾಮಗಳ ಜನರು ದಿನನಿತ್ಯ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗಾಗಿ ನಗರಕ್ಕೆ ಆಗಮಿಸುತ್ತಾರೆ. ಶಾಲಾ ಕಾಲೇಜುಗಳಿಗೆ ಅನೇಕ ವಿದ್ಯಾರ್ಥಿಗಳು ಬರುತ್ತಾರೆ. ಇವರೆಲ್ಲ ನಗರಕ್ಕೆ ಬರಲು ಅನುಕೂಲ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಈ ವೇಳೆ ಸೋಹಿಲ್ ತಿಮ್ಮಾಪುರಿ, ಟಿ. ತುಕಾರಾಮ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-30-2054439900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.