ಸುರಪುರ: ‘ಸುರಪುರದ ವಕೀಲರ ಸಂಘ ಮಾದರಿಯಾಗದ್ದು. ಇಲ್ಲಿಯ ಹಿರಿಯ ವಕೀಲರಿಂದ ಮತ್ತು ಇಲ್ಲಿಯ ಸೇವೆಯಿಂದ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ’ ಎಂದು ವರ್ಗಾವಣೆಗೊಂಡ ಸಿವಿಲ್ ನ್ಯಾಯಾಧೀಶ ಬಸವರಾಜ ಹೇಳಿದರು.

ಬುಧವಾರ ವಕೀಲರ ಸಂಘ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಇಲ್ಲಿನ ವಕೀಲರು ವೃತ್ತಿ ಘನತೆ, ಗೌರವ ಕಾಪಾಡಿಕೊಂಡು ಹೋಗುವಲ್ಲಿ ಎತ್ತಿದ ಕೈ. ಪ್ರಕರಣಗಳ ವಿಚಾರಣೆ ವೇಳೆ ವಕೀಲರು ಮಂಡಿಸುವ ವಾದ, ವಿವಾದ, ದಾಖಲೆಗಳ ಸಲ್ಲಿಸುವ ಪದ್ಧತಿ ಅನುಕರಣೀಯವಾಗಿದೆ’ ಎಂದು ಹೇಳಿದರು.

‘ನಾನು ಇಲ್ಲಿ ಎಷ್ಟು ದಿನ ಸೇವೆಯಲ್ಲಿದ್ದೆ ಎನ್ನುವುದಕ್ಕಿಂತ ಹೇಗೆ ಸೇವೆ ಸಲ್ಲಿಸಿದ್ದೇನೆ ಎಂಬುದು ಮುಖ್ಯ. ಇರುವಷ್ಟು ದಿನ ಎಲ್ಲರ ಪ್ರೀತಿಗೆ ಪಾತ್ರನಾಗಿ ನಿಮ್ಮೆಲ್ಲರೊಂದಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ನಾನು ಎಲ್ಲಿಯೇ ಇರಲಿ ಇಲ್ಲಿಯ ವಕೀಲರ ಸಂಘ, ವಕೀಲರನ್ನು ಸದಾ ನೆನೆಪಲ್ಲಿ ಇಟ್ಟುಕೊಳ್ಳುತ್ತೇನೆ’ ಎಂದು ಹೇಳಿದರು.

ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಮಾತನಾಡಿ, ‘ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಸುಲಭದ ಮಾತಲ್ಲ. ಸಾರ್ವಜನಿಕವಾಗಿ ಬೆರೆಯವಂತಿಲ್ಲ. ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಸಾಮಾನ್ಯ. ನ್ಯಾಯಾಧೀಶ ಬಸವರಾಜ ಅವರು ಇರುವಷ್ಟು ದಿನ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಲಿ’ ಎಂದು ಶುಭ ಕೋರಿದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಅನ್ಸೂರ್, ವಕೀಲರಾದ ಯಂಕಾರೆಡ್ಡಿ ಬೋನ್ಹಾಳ, ಚನ್ನಪ್ಪ ಹೂಗಾರ, ಸಂಗಣ್ಣ ಬಾಕ್ಲಿ ಮಾತನಾಡಿದರು.

ಮಲ್ಲಿಕಾರ್ಜುನಯ್ಯ ಹಿರೇಮಠ ಸ್ವಾಗತಿಸಿದರು. ಬಲಭೀಮ ನಾಯಕ ನಿರೂಪಿಸಿದರು. ಮಲ್ಲಣ್ಣ ಬೋಯಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-30-408602040

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.