ಸುರಪುರ: ‘ಕಾಲೇಜು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಮ್ಮ ಸರ್ಕಾರ ಕಾಲೇಜು ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ ₹2 ಕೋಟಿ ಮಂಜೂರು ಮಾಡಿದೆ. ಈ ಅನುದಾನದಲ್ಲಿ ಮೂರು ಮಹಡಿಯ ಭವ್ಯ ಕಟ್ಟಡ ನಿರ್ಮಾಣಗೊಳ್ಳಲಿದೆ’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ತಿಳಿಸಿದರು.

ನಗರದ ಕಮಲಕಿಶೋರ ಗೋವರ್ಧನದಾಸ ಲಡ್ಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶುಕ್ರವಾರ ಆಡಳಿತ ಕಚೇರಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘2024-25ನೇ ಸಾಲಿನ ಎಸ್ಸಿಪಿ, ಟಿಎಸ್ಪಿ ಯೋಜನೆ ಅಡಿ ಅನುದಾನ ಮಂಜೂರಾಗಿದೆ. ಕಾಮಗಾರಿಯನ್ನು ಬೆಂಗಳೂರಿನ ರೈಟ್ಸ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ’ ಎಂದು ವಿವರಿಸಿದರು.

‘ಕಾಮಗಾರಿಯನ್ನು ಬೇಗ ಆರಂಭಿಸಿ ತ್ವರಿತವಾಗಿ ಮುಗಿಸಬೇಕು. ಕ್ರಿಯಾಯೋಜನೆಯಂತೆ ಕೆಲಸ ಮಾಡಿ. ಮರಳು, ಸಿಮೆಂಟ್, ಕಂಕರ್ ಸಮರ್ಪಕವಾಗಿ ಬಳಸಿ. ಸರಿಯಾಗಿ ಕ್ಯೂರಿಂಗ ಮಾಡಿ. ಕಾಮಗಾರಿ ಕಳಪೆ ಮಾಡದೆ ಗುಣ ಮಟ್ಟ ಕಾಯ್ದುಕೊಳ್ಳಬೇಕು’ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರನಾಯಕ, ಮುಖಂಡರಾದ ಮಲ್ಲಣ್ಣ ಸಾಹು, ಮುದೋಳ, ರವಿಚಂದ್ರ ಸಾಹು ಆಲ್ದಾಳ, ಸೂಗೂರೇಶ ವಾರದ, ಅಬ್ದುಲ್ಗಫಾರ್ ನಗನೂರಿ, ಶೇಖಮಹಿಬೂಬ ಒಂಟಿ, ವೆಂಕಟರೆಡ್ಡಿ ಬೋವಿ, ನಾಸೀರಹುಸೇನ ಕುಂಡಾಲೆ, ಖಾಲೀದ್ ಅಹ್ಮದ್ ತೀಕೋಟಿ, ನಾಗಪ್ಪ ಕಟ್ಟಿಮನಿ, ಪ್ರಕಾಶ ಅಲಬನೂರ, ರಾಘವೇಂದ್ರ ಗೆದ್ದಲಮರಿ, ಕಾಲೇಜಿನ ಪ್ರಾಂಶುಪಾಲ ಬಲಭೀಮರಾಯ ದೇಸಾಯಿ, ಉಪನ್ಯಾಸಕರಾದ ದೇವು ಪಾಟೀಲ. ಹಣಮಂತ್ರಾಯ ವಗ್ಗಾ, ಜಗದೀಶ ನಾಯಕ, ಶಾಂತು ನಾಯಕ, ಬಸವರಾಜ ನಡಕೂರ, ಕಾಮಗಾರಿ ಕಂಪನಿಯ ಎಇಇ ಮನೋಜಕುಮಾರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-30-1070400416

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.