ಸುರಪುರ: ‘ಸರ್ಕಾರಿ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಲು ರೈತರಿಗೆ ಎಫ್ಐಡಿ ಅಗತ್ಯವಾಗಿದೆ. ಇದುವರೆಗೂ ಎಫ್ಐಡಿ ಮಾಡಿಸಿಕೊಳ್ಳದೆ ಇರುವ ರೈತರು ಕೂಡಲೆ ಎಫ್ಐಡಿ ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ಸುರಪುರ ತಾಲ್ಲೂಕಿನಲ್ಲಿ 75,526 ಸರ್ವೆ ನಂಬರ್ಗಳಿದ್ದು ಈ ಪೈಕಿ 51,876 ಸರ್ವೆ ನಂಬರಗಳ ಎಫ್ಐಡಿಯಾಗಿವೆ. ಇನ್ನುಳಿದ 23,650 ಸರ್ವೆ ನಂಬರ್ಗಳು ನೋಂದಣಿಯಾಗಿಲ್ಲ. ಹುಣಸಗಿ ತಾಲ್ಲೂಕಿನಲ್ಲಿ 54,056 ಸರ್ವೆ ನಂಬರ್ಗಳಿದ್ದು ಈ ಪೈಕಿ 39,970 ಸರ್ವೆ ನಂಬರ್ಗಳು ಮಾತ್ರ ಎಫ್ಐಡಿಯಾಗಿದ್ದು ಇನ್ನುಳಿದ 14,086 ಸರ್ವೆ ನಂಬರಗಳು ನೋಂದಣಿಯಾಗಿಲ್ಲ’ ಎಂದು ತಿಳಿಸಿದ್ದಾರೆ.

‘ರೈತರಿಗೆ ಅವಶ್ಯಕವಾಗಿರುವ ಡಿಎಪಿ ಸೇರಿದಂತೆ ಇತರೆ ರಸಗೊಬ್ಬರಗಳನ್ನು ಪಡೆದುಕೊಳ್ಳಲು, ಬೆಳೆ ಪರಿಹಾರ, ಬೆಳೆ ವಿಮೆ ಸೌಲಭ್ಯ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಸೌಲಭ್ಯ ಪಡೆಯಲು, ಎಪಿಎಂಸಿ ಮತ್ತು ಖರೀದಿ ಕೇಂದ್ರಗಳಲ್ಲಿ ಭತ್ತ, ತೊಗರಿ, ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳ ಮಾರಾಟಕ್ಕೆ ಎಫ್ಐಡಿ ಅಗತ್ಯವಾಗಿದೆ’ ಎಂದು ತಿಳಿಸಿದ್ದಾರೆ.

‘ನೋಂದಣಿ ಮಾಡಿಸಿಕೊಳ್ಳದೆ ಇರುವ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಅಥವಾ ಆನ್ಲೈನ್ ಕೇಂದ್ರಗಳಲ್ಲಿ ಜಮೀನಿನ ಪಹಣಿ. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಕೊಟ್ಟು ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-30-145582030

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.