ಸುರಪುರ: ಅಧಿಕ ಮಾಸದ ಅಂಗವಾಗಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಸಮೀಪದ ವೆಂಕಟಾಪುರದ ಸಿದ್ಧಿ ಪುರುಷ ಅಯ್ಯಣ್ಣ ಶರಣರ ಸಿದ್ಧಾಶ್ರಮದಲ್ಲಿ ಅಬ್ಬೆತುಮಕೂರಿನ ಗಂಗಾಧರ ಶಿವಾಚಾರ್ಯರ ಆಜ್ಞಾನುಸಾರ ವಿವಿಧ ಹೋಮಗಳನ್ನು ಮೂರು ದಿನಗಳವರೆಗೆ ಆಯೋಜಿಸಲಾಗಿದೆ.

ಬುಧವಾರ ಬೆಳಿಗ್ಗೆ ಗಂಗಾ ಪೂಜೆ, ಗೋವುಗಳ ಪೂಜೆ, ಯಜ್ಞಮಂಟಪ ಪ್ರವೇಶ ನಡೆಯಿತು. ನಂತರ ಅಯ್ಯಣ್ಣ ಶರಣರ ಕತೃ ಗದ್ದುಗೆಗೆ ರುದ್ರಾಭಿಷೇಕ ಮಾಡಲಾಯಿತು. ಬೆಳಿಗ್ಗೆ 10 ಗಂಟೆಗೆ ಸ್ಥಾಪಿತ ದೇವತೆಗಳ ಆಹ್ವಾನದ ನಂತರ ಗಣ ಹೋಮ ನಡೆಯಿತು. 32 ಜೋಡಿ ದಂಪತಿಗಳು ಹೋಮದಲ್ಲಿ ಪಾಲ್ಗೊಂಡಿದ್ದರು.

ಪೌರೋಹಿತ್ಯ ವಹಿಸಿದ್ದ ಸೋಲಾಪುರದ ಕರಿಬಸವಯ್ಯ ಶಾಸ್ತ್ರಿ ಮಾತನಾಡಿ, ‘ಅನಾದಿ ಕಾಲದಿಂದಲೂ ಹೋಮಗಳನ್ನು ಮಾಡುವುದು ನಮ್ಮ ಪರಂಪರೆ. ಹೋಮಗಳಿಂದ ಪರಿಸರ ಶುದ್ಧಿಯಾಗುತ್ತದೆ. ನಕಾರಾತ್ಮಕ ಅಂಶಗಳು ತೊಲಗುತ್ತವೆ. ಒಳ್ಳೆಯ ಆರೋಗ್ಯ ಲಭಿಸುತ್ತದೆ. ಸ್ಥಳದಲ್ಲಿ ದೈವಿಕ ಕಳೆ ಉಂಟಾಗುತ್ತದೆ’ ಎಂದರು.

‘ಒಂದೊಂದು ಸಿದ್ಧಿಗೆ ಪ್ರತ್ಯೇಕ ಹೋಮಗಳಿವೆ. ಪ್ರತಿಯೊಬ್ಬರು ಹೋಮಗಳನ್ನು ವರ್ಷಕ್ಕೆ ಒಂದು ಬಾರಿಯಾದರೂ ತಮ್ಮ ತಮ್ಮ ಮನೆಗಳಲ್ಲಿ ಮಾಡಬೇಕು. ಸಾಮೂಹಿಕ ಹೋಮಗಳು ಒಳ್ಳೆಯದು. ಹೋಮಗಳಿಂದ ಕಾಡಾಟಗಳು ತೊಲಗಿ ನೆಮ್ಮದಿ ಲಭಿಸುತ್ತದೆ. ಸುಖ, ಶಾಂತಿ, ಸಮೃದ್ಧಿ ಉಂಟಾಗುತ್ತದೆ’ ಎಂದರು.

ಹೋಮದ ನಂತರ ಅನ್ನಸಂತರ್ಪಣೆ ನಡೆಯಿತು. ಸಂಜೆ ಮಹಾಮೃತ್ಯುಂಜಯ ಹೋಮ ಜರುಗಿತು. ಬಾಜಿ ಮೇಳ, ಆಲ್ದಾಳದ ಡೊಳ್ಳಿನ ತಂಡದಿಂದ ನೃತ್ಯ, ಚಂದಲಾಪುರದ ಬಲಭೀಮೇಶ್ವರ ಭಜನಾ ಮಂಡಳಿಯಿಂದ ಭಜನೆ ಏರ್ಪಡಿಸಲಾಗಿತ್ತು.

ಅಯ್ಯಣ್ಣ ಶರಣರ ಪುತ್ರ ವಿಶ್ವರಾಧ್ಯ, ಮುಖಂಡ ರಾಜಾ ಮುಕುಂದನಾಯಕ, ಉದ್ಯಮಿ ಹನುಮಾನಸೇಠ ಝಂವರ್, ಡಾ. ರಾಘವೇಂದ್ರ ಎಲಿಗಾರ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಗುರುವಾರ ಚಂಡಿಕಾ ಹೋಮ, ರುದ್ರ ಯಾಗ, ಶುಕ್ರವಾರ ಅಬ್ಬೆತುಮಕೂರಿನ ಗಂಗಾಧರ ಶಿವಾಚಾರ್ಯರ ಸಮ್ಮುಖದಲ್ಲಿ ಸುದರ್ಶನ ಯಾಗ ಹಮ್ಮಿಕೊಳ್ಳಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-30-334420132

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.