ಸುರಪುರ: ‘ಸಮಾನತೆ, ಸತ್ಯ ಮತ್ತು ಸರಳತೆಗಳನ್ನು ತಮ್ಮ ತತ್ವ ಪದಗಳ ಮೂಲಕ ಕಡಕೋಳ ಮಡಿವಾಳೇಶ್ವರರು ಬಿಂಬಿಸಿದ್ದಾರೆ. ಅವರ ತತ್ವಪದಗಳು ಮಾನವೀಯತೆಯ ಮೌಲ್ಯಗಳ ಪ್ರತಿಬಿಂಬಗಳಾಗಿವೆ’ ಎಂದು ನಿಷ್ಠಿ ಕಡ್ಲಪ್ಪ ಮಠದ ಪೀಠಾಧಿಪತಿ ಪ್ರಭುಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ವಾಗಣಗೇರಾ ಗ್ರಾಮದಲ್ಲಿ ಕಡಕೋಳ ಮಡಿವಾಳೇಶ್ವರರ ನೂತನ ದೇವಸ್ಥಾನ, ಶಿಲಾಮೂರ್ತಿ ನಂದಿ ಪ್ರತಿಷ್ಠಾಪನೆ ಅಂಗವಾಗಿ ಹಮ್ಮಿಕೊಂಡಿರುವ ಕಡಕೋಳ ಮಡಿವಾಳೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ತತ್ವಪದ ಸಾಹಿತ್ಯದ ಮಹಾ ಮಂಟಪವನ್ನು ಕಡಕೋಳದಲ್ಲಿ ಹಲವಾರು ಶಿಷ್ಯ ಬಳಗದೊಂದಿಗೆ ನಿರ್ಮಿಸಿದ ಮಡಿವಾಳಪ್ಪನವರು ಸಗರನಾಡಿನ ನಂದಾ ದೀಪವಾಗಿದ್ದಾರೆ. ಅಂಥವರ ಶಾಖಾ ಮಠವನ್ನು ನಿರ್ಮಿಸಿ ಪುರಾಣ ಪ್ರವಚನ ಆಯೋಜಿಸಿರುವುದು ಸಂತಸದ ಸಂಗತಿ. ಭಕ್ತಿ ಭಾವದೊಂದಿಗೆ ಗುರು ಕೃಪೆ ಪಡೆದುಕೊಂಡು ಜೀವನ ಪಾವನವನ್ನಾಗಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಕಡಕೋಳ ಮಡಿವಾಳೇಶ್ವರ ಮಠದ ಪೀಠಾಧಿಪತಿ ರುದ್ರಮುನಿ ಶಿವಾಚಾರ್ಯರು ಸಂದೇಶ ನೀಡಿ, ‘ಪುರಾಣ ಪ್ರವಚನಗಳು ಮನುಷ್ಯನ ಮನಸ್ಸನ್ನು ಉಲ್ಲಸಿತಗೊಳಿಸುತ್ತವೆ. ಸಾಮಾಜಿಕ ಸಾಮರಸ್ಯವನ್ನು ಬೆಳೆಸುತ್ತವೆ. ಮಡಿವಾಳಪ್ಪನವರ ಆಶಯ ಸಾಮಾಜಿಕ ಸಾಮರಸ್ಯ ತರುವುದಾಗಿತ್ತು, ಮೂಢನಂಬಿಕೆಗಳನ್ನು ಹೊಡೆದೋ ಡಿಸುವುದಾಗಿತ್ತು’ ಎಂದು ಹೇಳಿದರು.

ಶಾಂತಯ್ಯಸ್ವಾಮಿ ವಾಗಣಗೇರಾ, ಶರಣಬಸವ ಸಾಧುಮಹಾರಾಜ ಮಂಗಳೂರು, ಮಲ್ಲಯ್ಯಸ್ವಾಮಿ ಹಿರೇಮಠ ವಾಗಣಗೇರಾ ವೇದಿಕೆಯಲ್ಲಿದ್ದರು. ಸಿದ್ದಯ್ಯ ಶಾಸ್ತ್ರಿ ತೋಳನೂರ ಪ್ರವಚನ ನಡೆಸಿಕೊಟ್ಟರು. ಕಲ್ಲಯ್ಯ ಗವಾಯಿಗಳು ಪರದಹಳ್ಳಿ ಸಂಗೀತ ಸೇವೆ ಸಲ್ಲಿಸಿದರು. ಮಹಾಂತೇಶ ಹುಲ್ಲೂರ ಶಹಾಪುರ ತಬಲಾ ಸಾಥ್ ನೀಡಿದರು.

ವೆಂಕೋಬ ನೀರಡಗಿ, ಕರೆಪ್ಪಗೌಡ ಹಂಚಿನಾಳ, ಲಿಂಗಯ್ಯ ಶಾಸ್ತ್ರಿ, ನಾನಾಗೌಡ ಮಾಲಿಪಾಟೀಲ, ಜಡಪ್ಪಗೌಡ, ಮಲ್ಲಣ್ಣ ಹಳೆಮನಿ, ಸಂತೋಷ ಸಾಹುಕಾರ, ಪರಶುರಾಮ ಶಾರದಹಳ್ಳಿ, ದೇವೇಂದ್ರಪ್ಪ ತಳಬಡಿ, ನರಸಪ್ಪ ಜಂಗಳಿ ಇತರರು ಭಾಗವಹಿಸಿದ್ದರು.

ಸುರಪುರ ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮರಾಯ ಮಂಗಳೂರು ನಿರೂಪಿಸಿದರು. ಶಿವರಾಜ ಪಾಟೀಲ ವಾಗಣಗೇರಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-30-809678809

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.