ಸುರಪುರ: ನಗರದ ಬಸ್ ನಿಲ್ದಾಣದ ಹತ್ತಿರ ಇರುವ ಹುಣಸಿಹೊಳೆ ಕಣ್ವಮಠದಲ್ಲಿ ಕೃಷ್ಣದ್ವೈಪಾಯನ ತೀರ್ಥರ ಆರಾಧನೆಯನ್ನು ಬುಧವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ಬೆಳಿಗ್ಗೆ ಪ್ರಭೋದೋತ್ಸವ, ಅಷ್ಠೋತ್ತರ ಪಠಣದ ನಂತರ ಅಭಿಷೇಕ ನಡೆಯಿತು. ವೃಂದಾವನವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಮಂಗಳಾರುತಿ ಮಂತ್ರಪುಷ್ಪ ಜರುಗಿದವು.

ಕಾತ್ಯಾಯನಿ ಭಜನಾ ಮಂಡಳಿಯವರು ಸುಶ್ರಾವ್ಯ ಭಜನೆ ಮಾಡಿ ಗಮನ ಸೆಳೆದರು. ಮಠಕ್ಕೆ ಅಡುಗೆ ಸಾಮಾನುಗಳನ್ನು ದೇಣಿಗೆ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು.

ಮಠಾಧಿಕಾರಿ ರಾಘವೇಂದ್ರಾಚಾರ್ಯ ರಾಜಪುರೋಹಿತ ಮಾತನಾಡಿ, ‘ಕೃಷ್ಣದ್ವೈಪಾಯನ ತೀರ್ಥರು ಕಣ್ವಮಠದ ಬಿಡಿ ಸನ್ಯಾಸಿಗಳು. ಮೋಕ್ಷ ಪ್ರಾಪ್ತಿಗಾಗಿ ಸನ್ಯಾಸ ಸ್ವೀಕರಿಸಿ ತಪಸ್ಸು, ಅನುಷ್ಠಾನಗಳಿಂದ ಅಗಾಧ ಸಾಧನೆ ಮಾಡಿದರು’ ಎಂದರು.

‘ಮೂಲತಃ ಸುರಪುರದವರೇ ಆದ ಅವರು ತಮ್ಮ ವೃಂದಾವನವನ್ನು ಸುರಪುರದಲ್ಲೆ ಸ್ಥಾಪಿಸಬೇಕು ಎಂದು ಬಯಸಿದ್ದರು. ಅಪರೋಕ್ಷ ಜ್ಞಾನಿಗಳಾದ ಅವರು ಇಂದಿಗೂ ಭಕ್ತರನ್ನು ಹರಸುತ್ತಿದ್ದಾರೆ’ ಎಂದರು.

‘ಕೃಷ್ಣದ್ವೈಪಾಯನ ತೀರ್ಥರು ಬೇಡಿದ್ದನ್ನು ಕೊಡುವ ಕಾಮಧೇನು ಎಂದು ಪ್ರಸಿದ್ಧರಾಗಿದ್ದಾರೆ. ಅವರನ್ನು ಭಕ್ತಿಯಿಂದ ಪೂಜಿಸಿ, ಸೇವೆ ಸಲ್ಲಿಸಿದರೆ ಖಂಡಿತ ಇಷ್ಟಾರ್ಥಗಳು ಸಿದ್ಧಿಸುತ್ತವೆ’ ಎಂದರು.

ನಂತರ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಭಜನೆ, ಮಹಾ ಮಂಗಳಾರುತಿಯೊಂದಿಗೆ ಆರಾಧನೆ ಸಂಪನ್ನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.