ಸುರಪುರ: ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಒಕ್ಕೂಟದ ಮುಖಂಡರು ಬೆಂಗಳೂರಿನಲ್ಲಿ ಸೋಮವಾರ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿ ಚನ್ನಣ್ಣನವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.

ಒಕ್ಕೂಟದ ಮುಖಂಡರು ಮಾತನಾಡಿ, ‘60 ವರ್ಷ ಪೂರೈಸಿದ ನೋಂದಾಯಿತ ಕಟ್ಟಡ ಕಾರ್ಮಿಕರ ಮಾಸಾಶನ ಪಡೆಯುವ ಕಾಲಮಿತಿಯನ್ನು ಹಿಂಪಡೆಯಬೇಕು. ಅವರ ಮಾಸಾಶನವನ್ನು ₹6 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

‘ಕಲ್ಯಾಣ ಕರ್ನಾಟಕ ಭಾಗದ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಎಂಜಿನಿಯರಿಂಗ್, ಮೆಡಿಕಲ್, ಅಗ್ರಿಕಲ್ಟರ್ ಮತ್ತು ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಶೇ 10ರಷ್ಟು ಪ್ರತ್ಯೇಕ ಮೀಸಲಾತಿ ಒದಗಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಿ.ಎನ್.ಟಿ.ಟಿ.ಎಫ್. ತಾಂತ್ರಿಕ ಕಾಲೇಜು ಪ್ರಾರಂಭಿಸಬೇಕು. ಮರಳು ನೀತಿ ಸರಳೀಕರಣಗೊಳಿಸಿ ಸರ್ಕಾರಿ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಿ ಕಟ್ಟಡ ಕಾರ್ಮಿಕರಿಗೆ ಕೆಲಸ ಒದಗಿಸಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಎಸ್.ಪಿ.ಸ್ವಾಮಿ, ಉಪಾಧ್ಯಕ್ಷ ಶಂಕರ ಕಟ್ಟಿಸಂಗಾವಿ, ರಾಜ್ಯ ಪ್ರ.ಕಾರ್ಯದರ್ಶಿ ಲೀಲಾವತಿ, ಕಲಬುರ್ಗಿ ಜಿಲ್ಲಾಧ್ಯಕ್ಷ ಮೊಹಸೀನ್ ಪಟೇಲ, ಯಾದಗಿರಿ ಜಿಲ್ಲಾಧ್ಯಕ್ಷ ಬಸವರಾಜ ಪೂಜಾರಿ, ತಾಲ್ಲೂಕು ಅಧ್ಯಕ್ಷ ರಾಜು ಕಲಾಲ್, ತಾಲ್ಲೂಕು ಕಾರ್ಯದರ್ಶಿ ಹಣಮಂತ ಟೊಣಪೆ ರಂಗಂಪೇಟ, ಯಾದಗಿರಿ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ದೇವತ್ಕಲ್, ಹುಣಸಗಿ ತಾಲ್ಲೂಕು ಅಧ್ಯಕ್ಷ ನಾಗಪ್ಪ ಬಂಡಿವಡ್ಡರ್, ವಡಗೇರಾ ಅಧ್ಯಕ್ಷ ಮೌನೇಶ ಬಡಿಗೇರ ಕುರಕುಂದಾ, ಮುಖಂಡರಾದ ತಾಲ್ಲೂಕು ಸಂಘಟನೆಯ ವೆಂಕೋಬ, ಬಸವರಾಜ ಪೊಲೀಸ್ ಪಾಟೀಲ ಹುಣಸಗಿ, ಮೈಬೂಬ ಏವೂರು, ಕಾಂತಪ್ಪ ಕಲ್ಲೂರ, ಯಲ್ಲಪ್ಪ ಕುರಡೆ, ನಾಗೇಶ ಗುತ್ತೇದಾರ, ಶಂಷುದ್ದೀನ್ ಹಿಪ್ಪರಗಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-30-279041036

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.