ಸುರಪುರ: ಇಲ್ಲಿಯ ವಕೀಲರ ಸಂಘಕ್ಕೆ ಗುರುವಾರ ಮತದಾನ ನಡೆಯಿತು. ಸಂಜೆ ನಡೆದ ಮತ ಎಣಿಕೆಯಲ್ಲಿ ಅನ್ಸೂರ ಪೆನಾಲ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದರು.

ಬೆಳಿಗ್ಗೆ 8 ಗಂಟೆಯಿಂದ ಸಂಜೆ 3 ಗಂಟೆವರೆಗೆ ವಕೀಲರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ಒಟ್ಟು 186 ಮತದಾರರ ಪೈಕಿ 178 ಮತಗಳು ಚಲಾವಣೆಯಾಗಿದ್ದವು. ಸಂಜೆ 7 ಗಂಟೆಗೆ ಮತ ಎಣಿಕೆ ಮುಗಿದು ಚುನಾವಣಾಧಿಕಾರಿ ನಂದನಗೌಡ ಪಾಟೀಲ ಫಲಿತಾಂಶ ಘೋಷಣೆ ಮಾಡಿದರು.

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಸವರಾಜ ಅನ್ಸೂರ 112 ಮತ ಪಡೆದರೆ ಪ್ರತಿಸ್ಪರ್ಧಿ ಚವ್ಹಾಲಕ್ಷ್ಮೀ ಪದ್ಮಾವತಿ 64 ಮತ ಪಡೆದು 48 ಮತಗಳ ಅಂತರದಿಂದ ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಲ್ಲಣ್ಣ ಬೋಯಿ 124 ಮತ್ತು ಸಂಗಪ್ಪ ಬಡಿಗೇರ 112 ಮತ ಪಡೆದು ವಿಜಯಿಯಾದರು. ಪ್ರತಿ ಸ್ಪರ್ಧಿ ಸಂತೋಷಕುಮಾರಿ ನಾಯಕ 87 ಮತ ಪಡೆದು ಪರಾಭವ ಗೊಂಡರು.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಲಭೀಮ ನಾಯಕ 98 ಮತ ಪಡೆದರೆ ಪ್ರತಿಸ್ಪರ್ಧಿ ದೇವರಾಜ ಜೋಗಿನ್ 79 ಮತ ಪಡೆದು ಪರಾಭವಗೊಂಡರು.

ಗ್ರಂಥಪಾಲಕ ಸ್ಥಾನದ ಅಭ್ಯರ್ಥಿ ನಾಗರೆಡ್ಡಿ ಗೌಡಪ್ಪ ಗೋಳ ನಗನೂರ 110 ಮತ ಪಡೆದರೆ ಪ್ರತಿಸ್ಪರ್ಧಿ ವಿನಾಯಕ ಜೇವರ್ಗಿ 61 ಮತ ಪಡೆದು ಪರಾಭವಗೊಂಡರು.

ಸಹ ಕಾರ್ಯದರ್ಶಿಯಾಗಿ ದೇವರಾಜ ನಾಯಕ ಖಜಾಂಚಿಯಾಗಿ ವಿಜಯಲಕ್ಷ್ಮೀ ಕೊಳ್ಳಿ ಅವಿರೋಧ ಆಯ್ಕೆಯಾದರು. ಸಹಾಯಕ ಚುನಾವಣಾಧಿಕಾರಿಯಾಗಿ ಜಗದೀಶ ಜಮದ್ರಖಾನಿ, ಸುರೇಂದ್ರ ದೊಡ್ಮನಿ ಕರ್ತವ್ಯ ನಿರ್ವಹಿಸಿ ದರು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕೋರ್ಟ್ ಆವರಣದಲ್ಲಿ ಅನ್ಸೂರ ಪೆನಾಲ್ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ ಪರಸ್ಪರ ಗುಲಾಲು ಎರಚಿ ಸಿಹಿ ಹಂಚಿ ಸಂಭ್ರಮಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-30-689362047

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.