ಸುರಪುರ ಶಾಸಕ ರಾಜೂಗೌಡರಿಗೆ ಕೋವಿಡ್ ದೃಢ

ಯಾದಗಿರಿ: ಜಿಲ್ಲೆಯ ಸುರಪುರ ಶಾಸಕ ನರಸಿಂಹ ನಾಯಕ (ರಾಜೂಗೌಡ) ಅವರಿಗೆ ಕೋವಿಡ್ ದೃಢಪಟ್ಟಿದೆ.
'ಕಳೆದ ಎರಡು ದಿನಗಳಿಂದ ಜ್ವರ ಇತ್ತು. ಶುಕ್ರವಾರ ಕೋವಿಡ್ ಪರೀಕ್ಷೆ ಮಾಡಿಕೊಂಡಾಗ ಕೋವಿಡ್ ದೃಢಪಟ್ಟಿದೆ. ಜ್ವರ ಮಾತ್ರ ಇದೆ. ಯಾವುದೇ ಲಕ್ಷಣಗಳು ಇಲ್ಲ. ವೈದ್ಯರ ಸಲಹೆ ಮೇರೆಗೆ ಏಳು ದಿನ ಹೋಂ ಕ್ವಾರಂಟೈನ್ ಆಗುತ್ತೇನೆ. ಕ್ಷೇತ್ರದ ಕೆಲಸಗಳಿದ್ದರೆ ಆಪ್ತಸಹಾಯಕರು, ಮುಖಂಡರು ನೋಡಿಕೊಳ್ಳುತ್ತಾರೆ. ಯಾರೂ ಆತಂಕ ಪಡಬೇಡಿ. ಕೋವಿಡ್ ಈಗ ಸಾಮಾನ್ಯವಾಗಿದೆ. ಶೀಘ್ರ ಗುಣಮುಖನಾಗಿ ನಿಮ್ಮ ಸೇವೆಗೆ ಬರುತ್ತೇನೆ' ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.