ಸುರಪುರ: ಅರಣ್ಯ ಇಲಾಖೆಯ ಸಿಬ್ಬಂದಿ ಲಾಲ ಅಹ್ಮದ್ ಮತ್ತು ವರುಣ ಅವರು ಗ್ರಾಮಸ್ಥರ ಸಹಕಾರದಿಂದ ಮಂಗಳವಾರ ತಾಲ್ಲೂಕಿನ ಮುಷ್ಠಳ್ಳಿ ಗ್ರಾಮದ ಹತ್ತಿರ ಮೊಸಳೆ ಸೆರೆ ಹಿಡಿದರು.

‘ಮೊಸಳೆ ಅಂದಾಜು ಒಂದೂವರೆ ವರ್ಷದ್ದಾಗಿದ್ದು, 1 ಮೀ. ಉದ್ದವಿದೆ. ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಮೊಸಳೆ ಬಿಡಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಭಾಗಣ್ಣಗೌಡ ತಿಳಿಸಿದರು.

ಎರಡು ಮೊಸಳೆ: ಗ್ರಾಮದ ಅನತಿ ದೂರದಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ರಸ್ತೆ ಕಾಮಗಾರಿಗೆ ಮಣ್ಣು ತೋಡಿದ್ದರು. ಐದಾರು ದೊಡ್ಡ ದೊಡ್ಡ ಕಂದಕಗಳು ಇವೆ. ಕಂದಕದ ನೀರಿನಲ್ಲಿ ಎರಡು ಮೊಸಳೆಗಳು ಒಂದು ವರ್ಷದ ಹಿಂದೆ ಬಂದು ಸೇರಿಕೊಂಡಿವೆ ಎಂದು ಗ್ರಾಮಸ್ಥರಾದ ಚಂದ್ರಶೇಖರ ಮೇಟಿ, ಬಸವರಾಜ ಅರವಾಣಿ ತಿಳಿಸಿದ್ದಾರೆ.

ಆಗಾಗ ಅವು ಕಂದಕದ ಮೇಲ್ಭಾಗದಲ್ಲೂ ಬರುತ್ತಿದ್ದವು. ಈ ಕುರಿತು ಹಲವು ಬಾರಿ ಪೊಲೀಸರಿಗೆ, ಅರಣ್ಯ ಇಲಾಖೆಗೆ ತಿಳಿಸಿದರೂ ಸ್ಪಂದನೆ ಸಿಗಲಿಲ್ಲ. ಎರಡು ದಿನಗಳ ಹಿಂದೆ ಮೇಕೆಯೊಂದಕ್ಕೆ ಮೊಸಳೆ ಗಾಯ ಮಾಡಿತ್ತು.

ಗ್ರಾಮಸ್ಥರು ಮತ್ತೆ ಮನವಿ ಮಾಡಿದಾಗ ಅರಣ್ಯ ಸಿಬ್ಬಂದಿ ಒಂದು ಮೊಸಳೆ ಮಾತ್ರ ಹಿಡಿಯಲು ಯಶಸ್ವಿಯಾಗಿದ್ದಾರೆ. ಇನ್ನೊಂದು ಮೊಸಳೆ ಸಿಕ್ಕಿಲ್ಲ. ಗ್ರಾಮಸ್ಥರು ಭಯದಿಂದ ಬದುಕುವಂತಾಗಿದೆ. ಇನ್ನೊಂದು ಮೊಸಳೆಯನ್ನೂ ಸೆರೆ ಹಿಡಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-30-1354709288

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.