ಸುರಪುರ: ‘ತಾಲ್ಲೂಕಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಇದೆ. ಯಾವುದೇ ಕೊರತೆ ಇಲ್ಲ. ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ’ ಎಂದು ಡಿವೈಎಸ್ಪಿ ಜಾವೇದ್ ಇನಾಂದಾರ್ ತಿಳಿಸಿದರು.

ಪೊಲೀಸ್ ಠಾಣೆಯಲ್ಲಿ ಬುಧವಾರ ಜರುಗಿದ ಪೆಟ್ರೋಲ್ ಪಂಪ್ ಬಂಕ್ಗಳ ಡೀಲರ್ಗಳ ಸಭೆಯಲ್ಲಿ ಮಾತನಾಡಿದ ಅವರು, ‘ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ದಾಸ್ತಾನಿದ್ದು, ಊಹಾಪೋಹಗಳನ್ನು ನಂಬಬಾರದು. ಸುಳ್ಳು ಹಾಗೂ ಆತಂಕದ ಸುದ್ದಿಗಳಿಗೆ ಗ್ರಾಹಕರು ಕಿವಿಗೊಡಬಾರದು’ ಎಂದು ಹೇಳಿದರು.

‘ಬಂಕ್ಗಳ ಡೀಲರ್ಗಳು ಯಾವುದೇ ಕಾರಣಕ್ಕೆ ಸ್ಟಾಕ್ ಮಾಡಕೂಡದು. ಕಾಳಸಂತೆಯಲ್ಲಿ ಮಾರಾಟ ಮಾಡುವಂತಿಲ್ಲ. ಹೆಚ್ಚಿನ ದರಕ್ಕೆ ಮಾರಾಟ ಮಾಡಕೂಡದು. ನಿಗದಿತ ದರದಲ್ಲಿಯೇ ಗ್ರಾಹಕರಿಗೆ ಸಮರ್ಪಕವಾಗಿ ಇಂಧನ ಹಾಕಬೇಕು. ಅಗತ್ಯಕ್ಕೆ ತಕ್ಕಂತೆ ಇಂಧನ ಪಡೆದು ಸಹಕರಿಸಬೇಕು. ಆತಂಕದ ಖರೀದಿ ಮಾಡಕೂಡದು’ ಎಂದು ಸಲಹೆ ನೀಡಿದರು.

ಪಿಐ ಉಮೇಶ್ ನಾಯಕ ಮಾತನಾಡಿದರು. ವಿವಿಧ ಪೆಟ್ರೋಲ್ ಬಂಕ್ಗಳ ನಿರ್ವಹಣಾಕಾರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-30-766423349

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.