ಸುರಪುರ: ತಾಲ್ಲೂಕಿನ ಸುಗೂರ ಗ್ರಾಮದ ಈ ಕುಟುಂಬ ತಲೆತಲಾಂತರದಿಂದ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ವಿಶೇಷ. 11ರ ಪೋರ ವಿಜಯಕುಮಾರ ಪೂಜಾರಿ ತಮ್ಮ ಹಿರಿಯರಂತೆ ರಂಗ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾನೆ.

ವಿಜಯಕುಮಾರ ಅವರ ಮುತ್ತಾತ ಭೀಮಪ್ಪ ಈ ಭಾಗದ ಖ್ಯಾತ ಪಿಟೀಲು ಮಾಸ್ತರ ಆಗಿದ್ದರು. ಆಗಿನ ಕಾಲದ ನಾಟಕಗಳಲ್ಲಿ ಪಿಟೀಲು ವಾದನ ಪ್ರಮುಖವಾಗಿತ್ತು. ತಾತ ದೇವಿಂದ್ರಪ್ಪ ನಾಟಕ ನಿರ್ದೇಶಕರು. ತಂದೆ ಬಸವರಾಜ ಸಂಗೀತ ನಿರ್ದೇಶನದ ಜೊತೆಗೆ ಹೆಣ್ಣು ಮತ್ತು ಗಂಡು ಧ್ವನಿಯಲ್ಲಿ ಸುಶ್ರಾವ್ಯವಾಗಿ ಹಾಡುತ್ತಾರೆ.

ಮನೆಯಲ್ಲಿ ಯಾವಾಗಲೂ ನಾಟಕಕ್ಕೆ ಸಂಬಂಧಿಸಿದ ಮಾತುಗಳು, ಇವರು ನಾಟಕಗಳೇ ಜೀವಾನಾಧಾರ ಮಾಡಿಕೊಂಡವರು. ಅಲ್ಪಸ್ವಲ್ಪ ಕೃಷಿ ಭೂಮಿಯೂ ಬೆನ್ನಿಗೆ ಇದೆ. ಮನೆಯಲ್ಲಿನ ಈ ವಾತಾವರಣ ವಿಜಯಕುಮಾರ ಅವರಿಗೆ ರಂಗಭೂಮಿಯಲ್ಲಿ ಆಸಕ್ತಿ ಮೂಡುವಂತೆ ಮಾಡಿತು. ತಂದೆ ನಾಟಕಗಳಲ್ಲಿ ಹಿನ್ನೆಲೆ ಹಾಡುವಾಗ, ಸಂಗೀತ ನಿರ್ದೇಶನ ಮಾಡುವಾಗ ದುಂಬಾಲು ಬಿದ್ದು ಬಾಲಕ ವಿಜಯಕುಮಾರ ಹೋಗುತ್ತಿದ್ದರು.

ರಿದಂಪ್ಯಾಡ್ ವಿಜಯಕುಮಾರ ಅವರಿಗೆ ಅಕರ್ಷಿಸಿಸಿತು. ತಂದೆ ಕೀಬೋರ್ಡ್ ಅದ್ಭುತವಾಗಿ ನುಡಿಸುತ್ತಾರೆ. ಕೀಬೋರ್ಡ್ ಕಲಿತುಕೋ ಎಂದರೂ ಕೇಳಲಿಲ್ಲ. ಹಠ ಮಾಡಿ ₹ 30 ಸಾವಿರ ಬೆಲೆಬಾಳುವ ರೋಲ್ಯಾಂಡ್ ಕಂಪನಿಯ ರಿದಂಪ್ಯಾಡ್ ತರಿಸಿಕೊಂಡರು. ಕಳೆದ ಒಂದು ವರ್ಷದಿಂದ ರಿದಂಪ್ಯಾಡ್ ಬಾರಿಸುವುದನ್ನು ಕರತಲಾಮಲಕ ಮಾಡಿಕೊಂಡರು. ತಂದೆಯ ಜೊತೆಗೆ ನಾಟಕಗಳಲ್ಲಿ ರಿದಂಪ್ಯಾಡ್ ಸಾಥ್ ನೀಡತೊಡಗಿದರು.

ಖಳನಾಯಕನ ಪ್ರವೇಶ, ಹಾಸ್ಯ ಸನ್ನಿವೇಶ, ದುಃಖದ ಪ್ರಸಂಗ, ಭಕ್ತಿ, ಹೊಡೆದಾಟ, ಡೈಲಾಗ್ ಡೆಲಿವರಿ, ಗಾಯನ, ಭಯದ ವಾತಾವರಣ ಇತರ ಸಮಯಗಳಲ್ಲಿ ರಿದಂಪ್ಯಾಡ್ ವಾದನ ಪ್ರಮುಖವಾಗಿರುತ್ತದೆ. ಸನ್ನಿವೇಶಕ್ಕೆ ತಕ್ಕಂತೆ ರಿದಂಪ್ಯಾಡ್ ಬಾರಿಸುವ ವಿಜಯಕುಮಾರ ನಾಟಕಕ್ಕೆ ರಂಗು ತರುತ್ತಾರೆ. ಆಯಾ ಸನ್ನಿವೇಶಕ್ಕೆ ತಕ್ಕಂತೆ ಬಾರಿಸುವ ಕಲೆ ಕರಗತವಾಗಿದೆ. ಎರಡು ಸ್ಟಿಕ್ ಹಿಡಿದು ಪ್ಯಾಡ್ಗೆ ತಗುಲಿಸುವ ಚಾಕಚಕ್ಯತೆ ಬೆರಗು ಮೂಡಿಸುತ್ತದೆ.

ಈಗಾಗಲೇ ಐದು ನಾಟಕಗಳಿಗೆ ರಿದಂಪ್ಯಾಡ್ ಬಾರಿಸಿ ಮನೆ ಮಾತಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ನಾಟವಾಡುವ ಹವ್ಯಾಸಿ ಕಲಾವಿದರು ರಿದಂಪ್ಯಾಡ್ಗೆ ವಿಜಯಕುಮಾರ ಬೇಕು ಎಂದು ಬೇಡಿಕೆ ಇಡುತ್ತಾರೆ. ಎರಡು ನಾಟಕಗಳಿಗೆ ₹ 10 ಸಾವಿರ ನೀಡುತ್ತಾರೆ.

6ನೇ ತಗರಗತಿಯಲ್ಲಿ ಓದುತ್ತಿರುವ ವಿಜಯಕುಮಾರ ಅವರಿಗೆ ಓದಿಗಿಂತ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ. ತಂದೆಗೆ ಚೆನ್ನಾಗಿ ಓದಿಸಿ ಸರ್ಕಾರಿ ನೌಕರಿ ಕೊಡಿಸಬೇಕೆನ್ನುವ ಹಂಬಲ. ಆದರೆ ವಿಜಯಕುಮಾರ ತಮ್ಮ ಹಿರಿಯರಂತೆ ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಸಂಗೀತದಲ್ಲಿ ವಿಪರೀತ ಸೆಳೆತ ಇದೆ. ಭವಿಷ್ಯದಲ್ಲಿ ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡಬೇಕೆನ್ನುವ ಮಹದಾಸೆ ಹೊಂದಿದ್ದೇನೆ
ವಿಜಯಕುಮಾರ ಪೂಜಾರಿ, ರಿದಂಪ್ಯಾಡ್ ವಾದಕ

ನನ್ನ ಏಕೈಕ ಸುಪುತ್ರ ವಿಜಯಕುಮಾರ. ಆತನ ಆಸೆಗೆ ಬೆಂಬಲ ನೀಡುತ್ತೇನೆ. ರಂಗ ಚಟುವಟಿಕೆ ನಮ್ಮ ಕುಟುಂಬದ ಬಳುವಳಿ
ಬಸವರಾಜ ಪೂಜಾರಿ, ಹಿನ್ನೆಲೆ ಗಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.