ಅಶೋಕ ಸಾಲವಾಡಗಿ

ಸುರಪುರ: ಪಕ್ಕದಲ್ಲೆ ಕೃಷ್ಣೆ ಹರಿಯುತ್ತಿದ್ದರೂ ಒಂದು ಕಾಲದಲ್ಲಿ ಅವಿಭಜಿತ ಸುರಪುರ ತಾಲ್ಲೂಕು ನೀರಿನ ಸಮಸ್ಯೆಯಿಂದ ಬಳಲುತ್ತಿತ್ತು. ಅದರಲ್ಲೂ ಕುಡಿಯುವ ನೀರಿಗೆ ಬೇಸಿಗೆ ಕಾಲದಲ್ಲಿ ತತ್ವಾರ ಉಂಟಾಗುತ್ತಿತ್ತು. ಪರ್ಜನ್ಯ ಜಪವೇ ಗತಿ ಎನ್ನುವಷ್ಟರ ಮಟ್ಟಿಗೆ ಭೀಕರವಾಗಿತ್ತು.

ಸದ್ಯ ಕೆಂಭಾವಿ ಹೋಬಳಿಯ ಯಕ್ತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಕ್ತಾಪುರ, ಆಲಾಳ (ಈ ಎರಡು ಗ್ರಾಮಗಳಲ್ಲಿ ಈಗ ಕೊಳವೆಬಾವಿ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ.) ತಳ್ಳಳ್ಳಿ ಬಿ, ಐನಾಪುರದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ನಡೆಯುತ್ತಿದೆ.

ಕೋನ್ಹಾಳ, ರತ್ತಾಳ, ಚಂದಲಾಪುರ, ವಾಗಣಗೇರಿ ಇತರ ಕೆಲ ಗ್ರಾಮಗಳಲ್ಲಿ ಆಗಾಗ ಸ್ವಲ್ಪ ನೀರಿನ ಸಮಸ್ಯೆ ಕಂಡು ಬರುತ್ತದೆ. ಕೆಲ ಗ್ರಾಮಗಳಲ್ಲಿ ಕೊಳವೆಬಾವಿ ಕೆಡುವುದು, ಮೋಟಾರು ಸುಡುವುದು ಇತರ ಸಮಸ್ಯೆಗಳು ಇರುತ್ತವೆ. ಅವೆಲ್ಲವೂ ತಾತ್ಕಾಲಿಕವಾಗಿದ್ದು ಸಂಬಂಧಿಸಿದ ಸಿಬ್ಬಂದಿ ದುರಸ್ತಿ ಮಾಡಿ ವ್ಯವಸ್ಥೆ ಸರಿಪಡಿಸುತ್ತಾರೆ.

ಸುರಪುರ ವಿಭಜನೆಯಾಗಿ ಹುಣಸಗಿ ತಾಲ್ಲೂಕು ಪ್ರತ್ಯೇಕವಾದ ಮೇಲೆ ಸುರಪುರ ತಾಲ್ಲೂಕಿನಲ್ಲಿ 110 ಗ್ರಾಮಗಳು ಒಳಗೊಂಡಿವೆ. ಎಲ್ಲ ತಾಲ್ಲೂಕುಗಳಲ್ಲಿ ಜೆಜೆಎಂ ಕಾಮಗಾರಿ ನಡೆದಿದೆ. ಅವುಗಳಲ್ಲಿ 90 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು ಉಳಿದ ಗ್ರಾಮಗಳಲ್ಲಿ ಪ್ರಗತಿಯಲ್ಲಿದೆ.

70 ಗ್ರಾಮಗಳಲ್ಲಿ ನೀರು ಶುದ್ದೀಕರಣ ಘಟಕ ಸ್ಥಾಪಿಸಲಾಗಿದೆ. ಅವುಗಳಲ್ಲಿ 16 ದುರಸ್ತಿಯಲ್ಲಿವೆ. ಕೆಲವು ಸಂಪೂರ್ಣ ಹದಗೆಟ್ಟಿದ್ದು ಹೊಸ ಘಟಕ ಸ್ಥಾಪನೆಗೆ ಅನುದಾನ ಬಿಡುಗಡೆಯಾಗಿದೆ. ಆದರೂ ಕೆಲ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣವಾಗಿದೆ. ಬಿಲ್ ಸಂಪೂರ್ಣ ಎತ್ತಲಾಗಿದೆ ಎಂಬ ದೂರುಗಳು ಇವೆ.

ಗುತ್ತಿಬಸವೇಶ್ವರದಲ್ಲಿ ಪ್ರಸ್ತುತ ಸಾಲಿನಲ್ಲಿ ಕೆಕೆಆರ್ಡಿಬಿ ಅನುದಾನ ₹65 ಲಕ್ಷ ವೆಚ್ಚದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗಿದೆ. ರತ್ತಾಳ ಗ್ರಾಮದಲ್ಲಿ ನೀರಿನ ಟ್ಯಾಂಕ್ ಅನುಪಯುಕ್ತವಾಗಿದ್ದು ಬೀಳುವ ಹಂತದಲ್ಲಿದೆ. ವಾಗಣಗೇರಿ ಗ್ರಾಮದಲ್ಲಿ ಸಮರ್ಪಕ ನೀರು ಸರಬರಾಜು ಮಾಡದಿರುವುದರಿಂದ ನೀರಿನ ಟ್ಯಾಂಕ್ ಮುಂದೆ ಯಾವಾಗಲು ಖಾಲಿ ಕೊಡಗಳ ಸಾಲು ಕಂಡು ಬರುತ್ತದೆ.

ಒಟ್ಟಾರೆ ತಾಲ್ಲೂಕಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಶ್ರಮವಹಿಸಿದ್ದಾರೆ. ಪರಿಣಾಮ ತಾಲ್ಲೂಕು ಸಂಪೂರ್ಣ ದಾಹ ಮುಕ್ತವಾಗುವತ್ತ ದಾಪುಗಾಲು ಹಾಕುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-30-983203124

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.