ಸುರಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನಲ್ಲಿ ಕೃಷ್ಣಾ ನದಿಯಿಂದ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿದ ₹4.25 ಕೋಟಿ ಮೌಲ್ಯದ 50 ಸಾವಿರ ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಿಕೊಂಡು ಜಮೀನುಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವೀರೇಶ ಶಾಂತಪ್ಪ ಅವರು ನೀಡಿದ ದೂರಿನ ಅನ್ವಯ ತಿಮ್ಮವ್ವ ಭೀಮಪ್ಪ, ಯಂಕಮ್ಮ ರಂಗಯ್ಯ, ನಾಗರಾಜ ಹನುಮಂತ, ಶರಣಮ್ಮ ಸೇರಿ 9 ಮಂದಿ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಮನೂರ ಸೀಮಾಂತರದ ತಿಮ್ಮವ್ವ ಜಮೀನಿನಲ್ಲಿ ₹31.18 ಲಕ್ಷ ಮೌಲ್ಯದ 3,669 ಮೆ.ಟನ್ ಮರಳು, ಯಂಕಮ್ಮ ಜಮೀನಿನಲ್ಲಿ ₹21.98 ಲಕ್ಷ ಮೌಲ್ಯದ 2,587 ಮೆ.ಟನ್, ನಾಗರಾಜ ಜಮೀನಿನಲ್ಲಿ ₹46.94 ಲಕ್ಷ ಮೌಲ್ಯದ 5,523 ಮೆ.ಟನ್ ಮರಳು, ಶರಣಮ್ಮ ಜಮೀನಿನಲ್ಲಿ ₹17.39 ಲಕ್ಷದ 2046 ಮೆ.ಟನ್ ಮರಳು ಹಾಗೂ ಉಮಾದೇವಿ ಜಮೀನಿನಲ್ಲಿ ₹43.41 ಲಕ್ಷ ಮೌಲ್ಯದ 5,108 ಮೆ.ಟನ್ ಮರಳು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಕರ್ನಾಳ ಸೀಮಾಂತರದಲ್ಲಿನ ಯಂಕಣ್ಣ, ಮಹಾದೇವಪ್ಪ ಅವರ ಜಮೀನಿನಲ್ಲಿ ₹90.34 ಲಕ್ಷ ಮೌಲ್ಯದ 10,629 ಮೆ.ಟನ್ ಮರಳು ಹಾಗೂ ಭೀಮಯ್ಯ ಸಂಜೀವಪ್ಪ ಜಮೀನಿನಲ್ಲಿ ₹1.74 ಕೋಟಿ ಮೌಲ್ಯದ 20,536 ಮೆ.ಟನ್ ಮರಳು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಆರೋಪಿಗಳು ಅನಧಿಕೃತವಾಗಿ ಕೃಷ್ಣಾ ನದಿಯಿಂದ ಮರಳನ್ನು ಗಣಿಗಾರಿಕೆ ಮಾಡಿ, ಕಳ್ಳತನದಿಂದ ಮಾರಾಟ ಮಾಡಲು ಸಂಗ್ರಹಿಸಿದ್ದರು. ಒಟ್ಟು ₹4.25 ಕೋಟಿ ಮೌಲ್ಯದ 50,098 ಮೆ.ಟನ್ ಮರಳು ಹಾಗೂ ತಲಾ ₹ 15 ಲಕ್ಷ ಮೌಲ್ಯದ ಎರಡು ಹಿಟಾಚಿಗಳನ್ನು ಜಪ್ತಿ ಮಾಡಲಾಗಿದೆ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-35-1234888211

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.