ಸುರಪುರ: ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಮಾದಿಗ ಸಮಾಜದ ವಿವಿಧ ಸಂಘಟನೆಗಳ ಒಕ್ಕೂಟದವರು ಶುಕ್ರವಾರ ಗಾಂಧಿವೃತದಲ್ಲಿ ಪ್ರತಿಭಟನೆ ನಡೆಸಿದರು.

ಮುಖಂಡ ದಾನಪ್ಪ ಕಡಿಮನಿ ಮಾತನಾಡಿ, ‘ರಾಜ್ಯದಲ್ಲಿ ಸದ್ಯ 2.85 ಲಕ್ಷ ಹುದ್ದೆಗಳು ಖಾಲಿ ಇವೆ. ಇದರಲ್ಲಿ 56,432 ಹುದ್ದೆಗಳನ್ನು ಹಳೆ ಮೀಸಲಾತಿ ಅನುಸರಿಸಿ ನೇಮಕ ಮಾಡುವಲ್ಲಿ ಮೋಸ, ವಂಚಿಸುವ ರಾಜಕೀಯದಾಟ ನಡೆದಿರುತ್ತದೆ. ಇದರಿಂದ ಒಳ ಮೀಸಲಾತಿಯಲ್ಲಿ ಬರುವ ಪರಿಶಿಷ್ಟ ಜಾತಿಯವರೆಗೆ ತುಂಬಾ ಅನ್ಯಾಯವಾಗುತ್ತದೆ ಇದನ್ನು ಉಗ್ರವಾಗಿ ಖಂಡಿಸುತ್ತೇವೆ’ ಎಂದು ಹೇಳಿದರು.

‘ಸರ್ಕಾರ ಒಳ ಮೀಸಲಾತಿಯ ಜಾತಿಯ ಜನಗಣತಿಯ ಅನುಗುಣವಾಗಿ ನೇಮಕಾತಿ ಮಾಡದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ತಾಲ್ಲೂಕು ಮಟ್ಟದಿಂದ ಹಿಡಿದು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಒಳ ಮೀಸಲಾತಿ ಜನಗಣತಿ ಅನುಗುಣವಾಗಿ ಉದ್ಯೋಗಗಳನ್ನು ನೇಮಕಾತಿ ಮಾಡಬೇಕು. ಎಸ್ಸಿ, ಎಸ್ಟಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ಶೋಷಣೆಗೆ ಒಳಗಾದ ಕುಟುಂಬಸ್ಥರಿಗೆ ಪರಿಹಾರ ನೀಡಿ ಸೂಕ್ತ ರಕ್ಷಣೆ ಒದಗಿಸಬೇಕು. ಬಡ ವಿದ್ಯಾರ್ಥಿಗಳಿಗೆ ತರಗತಿವಾರು ಶಿಷ್ಯ ವೇತನವನ್ನು ಹೆಚ್ಚಿಗೆ ಮಾಡಬೇಕು. ರಾಜ್ಯದಲ್ಲಿ ಎಸ್ಸಿ,ಎಸ್ಟಿ ಬಡಕುಟುಂಬಗಳಿಗೆ ವಸತಿ ಯೋಜನೆಯಡಿಯಲ್ಲಿ ಮನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಲ್ಪಿಸಿ ಕೊಡಬೇಕು’ ಎಂದು ಆಗ್ರಹಿಸಿದರು.

ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಆಪ್ತ ಸಹಾಯಕ ಮಕಾಶಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಒಕ್ಕೂಟದ ಮುಖಂಡರಾದ ಹಣಮಂತ ಬಿಲ್ಲವ್, ಮರೆಪ್ಪ, ಹಣಮಂತ ಕಟ್ಟಿಮನಿ, ದೇವಿಂದ್ರಪ್ಪ ಶಾಂತಗಿರಿ, ಪರಮಣ್ಣ, ಹುಲಗಪ್ಪ ಶೆಳ್ಳಗಿ, ಬಸವರಾಜ ಡಿಸಿ ಮುಷ್ಠಳ್ಳಿ, ನಾಗರಾಜ ಓಕುಳಿ, ಅಂಬ್ಲಪ್ಪ ಅರಳಹಳ್ಳಿ, ಮಲ್ಲಿಕಾರ್ಜುನ ಕವಡಿಮಟ್ಟಿ, ಕೃಷ್ಣಾ ಕಡಿಮನಿ, ಜಟೆಪ್ಪ ಸತ್ಯಂಪೇಟೆ, ಭೀಮಣ್ಣ ದಿವಳಗುಡ್ಡ, ಸಾಹೇಬಣ್ಣ ದೇವರಗೋನಾಲ, ಪರಮಣ್ಣ ಹುಣಸಗಿ, ಭೀಮಾಶಂಕರ, ನಿಂಗಪ್ಪ, ನಾಗಪ್ಪ, ಸಿದ್ದಪ್ಪ, ಆದಪ್ಪ ಅರಳಹಳ್ಳಿ, ನಿಂಗಪ್ಪ ದೇವರಗೋನಾಲ, ಸಿದಪ್ಪ ಮಾವಿನಮಟ್ಟಿ, ದೇವಪ್ಪ, ಮಲ್ಲು ಬಿಲ್ಲವ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.