ಸುರಪುರ: ಎಸ್‌ಡಿಎಂಸಿ ಸದಸ್ಯರ ಆಯ್ಕೆ

7

ಸುರಪುರ: ಎಸ್‌ಡಿಎಂಸಿ ಸದಸ್ಯರ ಆಯ್ಕೆ

Published:
Updated:
Deccan Herald

ಸುರಪುರ: ‘ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಸರ್ಕಾರವು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಪೋಷಕರ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೋಮರೆಡ್ಡಿ ಮಂಗಿಹಾಳ ಹೇಳಿದರು.

ನಗರದ ಖುರೇಷಿ ಮೊಹಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಸಮಿತಿಯ ನೂತನ ಸದಸ್ಯರ ಆಯ್ಕೆ ಸಭೆಯಲ್ಲಿ ಶನಿವಾರ ಮಾತನಾಡಿದರು.

‘ಶಾಲೆಯು ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರ ಪಾತ್ರ ಮುಖ್ಯವಾಗಿರುತ್ತದೆ. ಇಬ್ಬರೂ ಕೈಜೋಡಿಸಿದಾಗ ಮಾತ್ರ ವಿದ್ಯಾರ್ಥಿಗಳಿಗೆ ಭವಿಷ್ಯ ಉತ್ತಮವಾಗಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಸಿ.ಆರ್.ಪಿ. ತಿಪ್ಪಣ್ಣ ಸಿನ್ನೂರ, ಮುಖ್ಯ ಶಿಕ್ಷಕ ಸಾಮ್ಯುವೇಲ್, ಶಿಕ್ಷಕರಾದ ಮಮತಾ ವಿ.ಪಿ, ಉರ್ದು ಶಾಲೆಯ ಮುಖ್ಯ ಶಕ್ಷಕಿ ಸಬಿಹಾಬಾನು ಇದ್ದರು.

ಅಂಬ್ಲಪ್ಪ ನಾಗಪ್ಪ (ಅಧ್ಯಕ್ಷ), ರಾಧಾ ತಿಪ್ಪಣ್ಣ (ಉಪಾಧ್ಯಕ್ಷೆ) ಹಾಗೂ 16 ಸದಸ್ಯರನ್ನು ಸರ್ವಾನುಮತದಿಂದ ಎಸ್‌ಡಿಎಂಸಿ ನೂತನ ಸದಸ್ಯರಾಗಿ ಆಯ್ಕೆಯಾದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !