ಸೋಮವಾರ, ಆಗಸ್ಟ್ 2, 2021
21 °C

ತಪಾಸಣೆಗೆ ತಾಂಡಾ ನಿವಾಸಿಗಳ ನಿರಾಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯರಗೋಳ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಥಾವರು ನಾಯಕ ತಾಂಡಾದಲ್ಲಿ (ಕಂಟೇನ್ಮೆಂಟ್ ಝೋನ್) ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಸ್ಕ್ರೀನಿಂಗ್ ಮತ್ತು ಗಂಟಲು ದ್ರವ ಪರೀಕ್ಷೆಗೆ ತೆರಳಿದ್ದ ‘ಮೊಬೈಲ್ ಫಿವರ್ ಕ್ಲಿನಿಕ್’ ಸಿಬ್ಬಂದಿಯ ಕರ್ತವ್ಯಕ್ಕೆ ತಾಂಡಾ ನಿವಾಸಿಗಳು ಭಾನುವಾರ ಅಡ್ಡಿಪಡಿಸಿದರು.

20ಕ್ಕೂ ಹೆಚ್ಚು ಜನರಿದ್ದ ಗುಂಪೊಂದು ತಪಾಸಣೆಗೆ ತೆರಳಿದ್ದ ಆರೋಗ್ಯ ಸಿಬ್ಬಂದಿಗೆ ನಿಂದಿಸಿ, ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.

‘ನಮಗೇನಾಗಿದೆ, ನಮ್ಮ ಆರೋಗ್ಯ ಚೆನ್ನಾಗಿದೆ, ಕೆಮ್ಮು, ನೆಗಡಿ, ಶೀತ ಇಲ್ಲ. ನೀವು ತಾಂಡಾಕ್ಕೆ ಬರಬೇಡಿ. ಬಂದರೆ ಸರಿ ಇರಲ್ಲ’ ಎಂದು ಹೆದರಿಸಿದರು ಎಂದು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯರಗೋಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧರ್ಮಿಬಾಯಿ ಥಾವರು ನಾಯಕ ತಾಂಡಾ ನಿವಾಸಿಯಾಗಿದ್ದಾರೆ. ಪತಿ ರಾಜು ಚವ್ಹಾಣ, ಮಗ ಅರುಣಕುಮಾರ ಚವ್ಹಾಣ ಅವರು ಆರೋಗ್ಯ ತಪಾಸಣೆಗೆ ತೆರಳಿದ ಸಿಬ್ಬಂದಿಗೆ ಸಹಕಾರ ನೀಡದೆ, ತಾಂಡಾ ಜನರ ಪರ ಮಾತನಾಡಿದ್ದಾರೆ’ ಎಂದು ತಿಳಿಸಿದರು. ಗಲಾಟೆ ಹೆಚ್ಚಾಗುತ್ತಿದ್ದಂತೆ ತಪಾಸಣೆಗೆ ತೆರಳಿದ್ದ ಆರೋಗ್ಯ ಸಿಬ್ಬಂದಿ ತಾಂಡಾದಿಂದ ಹೊರ ಬಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು