ಕೋಟ್ಪಾ ಕಾಯ್ದೆ ಅಡಿ 11 ಪ್ರಕರಣ ದಾಖಲು

ಶನಿವಾರ, ಮಾರ್ಚ್ 23, 2019
31 °C

ಕೋಟ್ಪಾ ಕಾಯ್ದೆ ಅಡಿ 11 ಪ್ರಕರಣ ದಾಖಲು

Published:
Updated:
Prajavani

ಯಾದಗಿರಿ: ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ವಿವೇಕಾನಂದ ಟೆಂಗೆ ಅವರ ಮೇಲ್ವಿಚಾರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿ ‘ಕೋಟ್ಪಾ ಕಾಯ್ದೆ-2003’ರ ಅಡಿಯಲ್ಲಿ ಯಾದಗಿರಿಯ ಗಂಜ್ ಏರಿಯಾದಲ್ಲಿರುವ ಕಿರಾಣಿ ಅಂಗಡಿ ಮತ್ತು ಪಾನ್‌ಶಾಪ್‌ಗಳ ಮೇಲೆ ಗುರುವಾರ ದಾಳಿ ಮಾಡಲಾಯಿತು. ದಾಳಿಯಲ್ಲಿ 11ಪ್ರಕರಣಗಳನ್ನು ದಾಖಲಿಸಿಕೊಂಡು ₹2,500 ದಂಡವನ್ನು ವಿಧಿಸಲಾಗಿದೆ.

ಜಿಲ್ಲಾ ಸಲಹೆಗಾರರಾದ ಮಹಾಲಕ್ಷ್ಮೀ ಸಜ್ಜನ ಮಾತನಾಡಿ, ಜಿಲ್ಲೆಯಲ್ಲಿ ತಂಬಾಕು ಮಾರಾಟ ಕಾನೂನು ಬಾಹಿರವಾಗಿ ನಡೆಯುತ್ತಿದೆ. ಅಂಗಡಿ ಮತ್ತು ಪಾನ್‌ಶಾಪ್‌ಗಳು ವಿಶೇಷವಾಗಿ ತಂಬಾಕು ಉತ್ಪನ್ನಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮಕ್ಕಳಿಗೆ ಕಾಣುವ ಹಾಗೆ ಮಾರಾಟ ಮಾಡಬಾರದು. ಒಂದು ವೇಳೆ ಮಾರುವುದು ಕಂಡುಬಂದಲ್ಲಿ ಕಾನೂನಿನ ಪ್ರಕಾರ ದಂಡ ಹಾಗೂ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ, ಸಾಮಾಜಿಕ ಕಾರ್ಯಕರ್ತ ಮಾಸ್ಟರ್ ಫಿಲೀಪ್, ನಗರಸಭೆ ಆರೋಗ್ಯ ನಿರೀಕ್ಷಕ ಸುರೇಶ ಶೆಟ್ಟಿ, ನಗರ ಪೊಲೀಸ್ ಠಾಣೆ ಎಎಸ್‌ಐ ದೇವಿದಾಸ್ ಪಾಟೀಲ್, ಯಾದಗಿರಿ ವೃತ್ತ ಕಾರ್ಮಿಕ ನಿರೀಕ್ಷಕ ಶಿವಶಂಕರ ಬಿ.ತಳವಾರ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !