ಸೈದಾಪುರ: ಪ್ರತಿಯೊಬ್ಬರು ಶಿಕ್ಷಣ ಪಡೆದಾಗ ಮಾತ್ರ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯವಿದೆ. ಈ ದಿಸೆಯಲ್ಲಿ ನಾವು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹಾದೇವಪ್ಪ ದದ್ದಲ ಹೇಳಿದರು.
ಪಟ್ಟಣದ ವಲಯ ಮಾದಿಗ ದಂಡೋರ ಹೊರಾಟ ಸಮಿತಿ ವತಿಯಿಂದ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾಜದ ವತಿಯಿಂದ ಪ್ರೋತ್ಸಾಹ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಕರಾತ್ಮಕ ಮನೋಭಾವನೆ ಬೆಳೆಯುತ್ತದೆ. ಗಡಿ ಬಾಗದಲ್ಲಿ ವಿವಿಧ ಸಮಸ್ಯೆಗಳ ಮಧ್ಯದಲ್ಲಿ ಸಾಧನೆ ಮಾಡಿರುವುದು ವಿದ್ಯಾರ್ಥಿಗಳಲ್ಲಿನ ಪರಿಶ್ರಮ ತಿಳಿಸುವಂತಿದೆ ಎಂದು ಹೇಳಿದರು.
ವಲಯ ಅಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡೆದುಕೊಂಡು ಉತ್ತಮ ಸಾಧನೆ ಮಾಡಬೇಕು. ಇದಕ್ಕಾಗಿ ಪರಿಶ್ರಮ ಅತಿ ಮುಖ್ಯವಾಗಿದೆ. ಪೋಷಕರು ಈ ದಿಸೆಯಲ್ಲಿ ಮಕ್ಕಳಿಗೆ ಅನುಕೂಲತೆ ಕಲ್ಪಿಸಿ ಕೊಡಬೇಕು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಅಂದಾಗ ಮಾತ್ರ ಅಭಿವೃದ್ದಿ ಸಾಧ್ಯವಿದೆ. ಇದನ್ನು ಪರಿಗಣಿಸಿ ಮಕ್ಕಳಿಗೆ ಸಮಾಜದ ವತಿಯಿಂದ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ಸಾಧನೆ ವಿದ್ಯಾರ್ಥಿಗಳದಾಗಲಿ ಎಂದು ಹಾರೈಸಿದರು.
ಮಾರುತಿ ಮುಂಡಾಸ ದುಪ್ಪಲ್ಲಿ, ರಾಧಮ್ಮ ಕೋರೆ, ಸಾಯಿಬಣ್ಣ ಸೈದಾಪುರ, ನರಸಿಂಗ ಕೋರೆ, ಅನಿಲಕುಮಾರ ಬೆಳಗುಂದಿ, ರಾಜು ಕಡೇಚೂರು, ನರಸಪ್ಪ ನೀಲಹಳ್ಳಿ, ಅಂಜಪ್ಪ ಕಡೇಚೂರು, ರಾಜು ಕೂಡಲೂರ, ರಾಮು ಮಲ್ಹಾರ, ಎಸು ರಾಂಪೂರ, ಸಾಬರೆಡ್ಡಿ ಹೆಗ್ಗಣಗೇರಾ, ಎಸು ಬೆಳಗುಂದಿ, ಅರ್ಜುನ ಚಿಗನೂರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.